ಚಿತ್ರೀಕರಣದ ವೇಳೆ ಅಪಾಯದ ಅಂಚಿನಿಂದ ಪಾರಾದ ಸಂಚಾರಿ ವಿಜಯ್..!!

ಹೀರೋ ಆಗಿ ನಟಿಸಿದ ಮೊದಲ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿಗಳಿಸಿದ ಹೆಗ್ಗಳಿಕೆಗೆ ಪಾತ್ರರಾದ ಸಂಚಾರಿ ವಿಜಯ್ ಮಲಯಾಳಂನ ಥಿಯೇಟರ್' ಚಿತ್ರೀಕರಣ ಕನ್ಯಾಕುಮಾರಿಯ ಮೊಟ್ಟಂ ನಡೆಯುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಘಟನೆಯ ವೇಳೆ ವಿಜಯ್ ರವರ ಕಾಲಿಗೆ ಪೆಟ್ಟಾಗಿದ್ದು, ಈ ಫೋಟೋಗಳೊಂದಿಗೆ ಸ್ಟೇಟಸ್ ಆಕಿರುವ ವಿಜಿ ನನ್ನ ರೀತಿಯಲ್ಲಿ ನೀವು ಯಾರು ಮಾಡಿಕೊಳ್ಳಬೇಡಿ. ಜೀವನದಲ್ಲಿ ಜೀವನಕ್ಕೆ ಆಪಾಯ ತರುವಂತಹ ಯಾವುದೇ ಕೆಲಸವನ್ನ ಮಾಡಬೇಡಿ ಎಂದು ಮನವಿಯನ್ನೂ ಮಾಡಿದ್ದಾರೆ.
ನೀರಿಗಿಳಿಯುವ ದೃಶ್ಯವನ್ನ ಚಿತ್ರೀಕರಿಸುವ ಸಂದರ್ಭದಲ್ಲಿ ಸಿನಿಮಾತಂಡದ ಮಾತು ಕೇಳದೆ ನೀರಿಗಿಳಿದ ಸಂಚಾರಿ ವಿಜಿ ಕ್ಷಣ ಮಾತ್ರದಲ್ಲಿ ದುರಂತದಿಂದ ಪಾರಾಗಿದ್ದಾರೆ. ಸಮುದ್ರದಲ್ಲಿರುವ ಚೂಪಾದ ಕಲ್ಲುಗಳಿಂದ ಗಾಯಗೊಂಡಿರುವ ವಿಜಯ್ ಸದ್ಯ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾರೆ. ಈ ಬಗ್ಗೆ ತಮ್ಮ ಫೇಸ್ ಬುಕ್ ನಲ್ಲಿ ಹೀಗೆ ಬರೆದುಕೊಂಡಿದ್ದಾರೆ. ಒಂದೊಂದ್ಸಾರಿ ಎಷ್ಟು ಉದ್ಘಟತನ ಮಾಡೋಕೋಗ್ತೀನಿ ಅನ್ನೋದಕ್ಕೆ ಈ ಪಿಕ್ಚರ್ ಸಾಕು, ನೋಡಿ ಇವತ್ತು ಮಲೆಯಾಳಂ ಸಿನಿಮಾ ಚಿತ್ರೀಕರಣ ಮಾಡೋ ಟೈಮಲ್ಲಿ ನಾನಾಗ್ ನಾನೇ ಮಾಡ್ಕೊಂಡ ಯಡವಟ್ಟು. ಡೈರೆಕ್ಟರ್ ಬೇಡ ಅಂದ್ರೂ ತುಂಬಾ ರಿಸ್ಕ್ ತಗೊಂಡು ನೀರಿಗಿಳಿದಿದ್ದರ ಪರಿಣಾಮ" ಇದೆಲ್ಲ ಅಂತ ಹೇಳಿದ್ದಾರೆ.
Comments