ಬಾಕ್ಸ್ ಆಫೀಸ್ ನೇ ಕೊಳ್ಳೆ ಹೊಡೆದ 'ಪ್ರೇಮ ಬರಹ'..!!

ಅರ್ಜುನ್ ಸರ್ಜಾ ತಮ್ಮ ಮಗಳನ್ನು ಕನ್ನಡಕ್ಕೆ "ಪ್ರೇಮಬರಹ' ಮೂಲಕ ಪರಿಚಯಿಸಿದ್ದಾರೆ. ಪ್ರೀತಿಯ ಜೊತೆ ಜೊತೆಗೆ ಅದಕ್ಕೆ ದೇಶ ಭಕ್ತಿಯ ಸ್ಪರ್ಶ ನೀಡಿದ್ದು, ಆರಂಭದಿಂದ ಕೊನೆಯವರೆಗೂ ಚಿತ್ರ ನೋಡಿಸಿಕೊಂಡು ಹೋಗುತ್ತದೆ.
1999 ಸಮಯದಲ್ಲಿ ನಡೆದ ಭಾರತ- ಪಾಕಿಸ್ಥಾನದ ಯುದ್ದದ ಹಿನ್ನಲೆಯಲ್ಲಿ ತೆರೆದುಕೊಳ್ಳುವ ಕಥೆ ಮನ ರಂಜಿಸುತ್ತದೆ. ಎರಡು ಪ್ರತ್ಯೇಕ ಸುದ್ದಿ ವಾಹಿನಿಗಳಲ್ಲಿ ಕೆಲಸ ಮಾಡುವ ಮಧು(ಐಶ್ವರ್ಯ) ಹಾಗೂ ಸಂಜಯ್ (ಚಂದನ್) ನಡುವೆ ಸಣ್ಣ ಪ್ರಮಾಣದ ಜಗಳಗಳು ನಡೆಯುತ್ತವೆ, ಹತ್ತಾರು ಕೀಟಲೆಗಳು ನಡೆಯುತ್ತವೆ. ಈ ರೀತಿ ಕಿತ್ತಾಡುತ್ತಿರುವ ಇವರು ಭಾರತ-ಪಾಕಿಸ್ಥಾನ ಯುದ್ದದ ವರದಿ ಮಾಡಲು ಕಾರ್ಗಿಲ್ ಗೆ ತೆರಳುತ್ತಾರೆ. ಮಾರ್ಗ ಮದ್ಯೆ ಇಬ್ಬರ ನಡುವೆ ಜಗಳ ಮಾಯವಾಗಿ ಆತ್ಮೀಯತೆ ಬೆಳೆದು ಪ್ರೀತಿ ಮೊಳಕೆ ಹೊಡೆಯುತ್ತದೆ. ಆದರೆ ಇದಕ್ಕೂ ಮುನ್ನ ಮಧುಗೆ ಎಂಜೇಗ್ ಮೆಂಟ್ ಸಹ ಆಗಿ ಹೋಗಿರುತ್ತದೆ. ಈ ವಿಷಯ ಅರಿತುಕೊಂಡ ಸಂಜಯ್ ತನ್ನ ಪ್ರೀತಿಯನ್ನು ಹೇಳಿಕೊಳ್ಳುತ್ತಾನೆಯೇ, ಇವರಿಬ್ಬರ ಪ್ರೀತಿ ಹೇಗೆ ಕೊನೆಗೊಳ್ಳುತ್ತದೆಂಬುದನ್ನು ತೆರೆಯ ಮೇಲೆ ನೋಡಿ.
ಬರೀ ಪ್ರೇಮ ಕಥೆಯಾಗಿದ್ದರೆ ಸಹನೀಯವಾಗುತ್ತಿತ್ತೆನೋ ಆದರೆ ಅದರೊಂದಿಗೆ ದೇಶ ಭಕ್ತಿಯ ಪ್ರೇಮದ ಪರಾಕಷ್ಟೆ ಕಥೆಯಲ್ಲಿ ತಂದಿರುವುದರಿಂದ ಚಿತ್ರ ಅರಾಮಾಗಿ ನೋಡಿಸಿಕೊಂಡು ಹೋಗುತ್ತದೆ. ಜೆಸ್ಸಿ ಗಿಪ್ಟ ಸಂಗೀತದಲ್ಲಿ ಎರಡು ಹಾಡುಗಳು ಗುನುಗುವಂತಿವೆ. ಜೊತೆಗೆ ಒಂದು ಕುಟುಂಬವೊಂದರ ಕಥೆಯನ್ನು ಬಳಸಿಕೊಂಡಿದ್ದು, ಆ ಕುಟುಂಬದ ಹಿರಿಯ ತಲೆ, ಅವರ ಕನಸು, ಹಾಗೂ ಪರಿಣಾಮಕಾರಿಯಾದ ಪೈಟ್ ಗಳು, ಕಾಮಿಡಿ ಎಲ್ಲವೂ ಬಂದು ಹೋಗುತ್ತವೆ.ಇದೇ ಮೊದಲ ಬಾರಿಗೆ ನಾಯಕಿಯಾಗಿ ನಟಸಿರುವ ಐಶ್ವರ್ಯ ತೆರೆಯ ಮೇಲೆ ಮುದ್ದಾಗಿ ಕಾಣಿಸುತ್ತಾರೆ.ಚಂದನ್ ನಟನೆಯೂ ಇಷ್ಟವಾಗುತ್ತದೆ. ನಗಿಸುವುದಕ್ಕೆ ಸಾಧುಕೋಕಿಲ, ಬುಲೆಟ್ ಪ್ರಕಾಶ ಇದ್ದಾರೆ. ಒಂದು ಹಾಡಿನಲ್ಲಿ ದರ್ಶನ್, ಧೃವ, ಚಿರಂಜೀವಿ ಸರ್ಜಾ ಬಂದು ಹೋಗುತ್ತಾರೆ. ಯಾವುದೇ ಮುಜುಗರವಿಲ್ಲದೇ ಇಡೀ ಫ್ಯಾಮಿಲಿ ಸಮೇತ ಕುಳೊತು ನೋಡಬಹುದಾದ ಚಿತ್ರ "ಪ್ರೇಮಬರಹ" ಮಿಸ್ ಮಾಡದೇ ನೋಡಿ.
Comments