ಸ್ಯಾಂಡಲ್ ವುಡ್ ನ ಹೊಸ ನಟಿಯನ್ನು ಸ್ವಾಗತಿಸಿದ ಅಭಿನಯ ಚಕ್ರವರ್ತಿ



ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟ ,ನಿರ್ದೇಶಕ ಅರ್ಜುನ್ ಸರ್ಜಾ ಮಗಳು ಐಶ್ವರ್ಯ ಅರ್ಜುನ್ 'ಪ್ರೇಮ ಬರಹ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿರುವ ನಟಿ ಐಶ್ವರ್ಯ ಗೆ ಸ್ವಾಗತ ಕೋರಿದ್ದಾರೆ.
ಕನ್ನಡದ ಬಿಗ್ ಬಾಸ್ ರನ್ನರ್ ಚಂದನ್ ನಾಯಕನಾಗಿ ಹಾಗೂ ಮೊದಲ ಬಾರಿಗೆ ಐಶ್ವರ್ಯ ಅರ್ಜುನ್ ನಾಯಕಿಯಾಗಿ ಬಣ್ಣ ಹಚ್ಚಿರುವ 'ಪ್ರೇಮ ಬರಹ' ಚಿತ್ರ ಇಂದು ರಾಜ್ಯಾದ್ಯಂತ ತೆರೆ ಕಂಡಿದೆ. ಅರ್ಜುನ್ ಸರ್ಜಾ ನಿರ್ದೇಶನದ ಈ ಚಿತ್ರಕ್ಕೆ ಕನ್ನಡ ಚಿತ್ರರಂಗದ ದಿಗ್ಗಜರು ಹರಸಿ, ಹಾರೈಸಿದ್ದಾರೆ. ಇಂದು ನಟ ಕಿಚ್ಚ ಸುದೀಪ್ ಕೂಡ ಪ್ರೇಮ ಬರಹ ಚಿತ್ರಕ್ಕೆ ಶುಭಾಷಯ ಕೋರಿದ್ದಾರೆ. ತಮ್ಮ ಟ್ವಟರ್ನಲ್ಲಿ ಪ್ರೇಮ ಬರಹ ಚಿತ್ರದ ಬಗ್ಗೆ ಮಾತನಾಡಿರುವ ಕಿಚ್ಚ, ಕನ್ನಡ ಚಿತ್ರರಂಗಕ್ಕೆ ನಟಿ ಐಶ್ವರ್ಯ ಅರ್ಜುನ್ ಗೆ ಸ್ವಾಗತ ಕೋರಿದ್ದಾರೆ. ಇದರ ಜತೆಗೆ ಚಂದನ್ ಹಾಗೂ ಇಡೀ ಚಿತ್ರತಂಡಕ್ಕೆ ವಿಶ್ ಮಾಡಿದ್ದಾರೆ ಕಿಚ್ಚ ಸುದೀಪ್.
Comments