ಕೊನೆಗೂ ಅಭಿಮಾನಿಗೆ ದಾಸನ ದರ್ಶನ..!!

ಕೆಲ ದಿನಗಳಿಂದ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ರೇವಂತ್ ರವರ ಆಸೆಯನ್ನು ಈಡೇರಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ ತಮ್ಮ ಅಪ್ಪಟ ಅಭಿಮಾನಿಯ ಆಸೆಗೆ ಅಸ್ತು ಎಂದಿದ್ದಾರೆ . ಅಲ್ಲದೆ ರೇವತ್ ರವರೊಂದಿಗೆ ವಿಡಿಯೋ ಕಾಲ್ ನಲ್ಲಿ ಮಾತನಾಡಿ ಅವರಿಗೆ ಆತ್ಮ ಸ್ಥೈರ್ಯ ತುಂಬಿ ವಿಶ್ವಾಸ ಮೂಡಿಸಿದ್ದಾರೆ.
ಪ್ರತಿ ವರ್ಷ ಫೆ.16ಕ್ಕೆ ರೇವಂತ್ ದರ್ಶನ್ ಹುಟ್ಟುಹಬ್ಬಕ್ಕೆ ಶಿವಮೊಗ್ಗದಿಂದ ಬೆಂಗಳೂರಿಗೆ ಬಂದು ಶುಭ ಹಾರೈಸುತ್ತಿದ್ದರು. ಆದರೆ ಈ ವರ್ಷ ದರ್ಶನ್ ಭೇಟಿ ಮಾಡಲು ಸಾಧ್ಯವಿಲ್ಲ ಎಂದು ದುಖಃದಲ್ಲಿದ್ದರು. ವೈದ್ಯರು ಇನ್ನು ಮುಂದೆ ನಮ್ಮಿಂದ ಏನೂ ಮಾಡಲು ಸಾಧ್ಯವಿಲ್ಲ ಎಂದು ಕೈ ಚೆಲ್ಲಿದ್ದಾರೆ. ಇಂತಹ ಸ್ಥಿತಿಯಲ್ಲಿರುವ ರೇವಂತ್ ಅವರ ಕಡೆಯ ಆಸೆಯಾಗಿ ದರ್ಶನ್ ಅವರನ್ನು ನೋಡಬೇಕು ಎಂದು ಹೇಳಿದ್ದರು. ರೇವಂತ್ ಜೊತೆಗೆ ಮಾತನಾಡಿದ ನಟ ದರ್ಶನ್, ನಾನಿದ್ದೇನೆ ಜೊತೆಗೆ ಅಂತಾ ಹೇಳುವ ಮೂಲಕ ಆತನಿಗೆ ಧೈರ್ಯ ತುಂಬಿದ್ದಾರೆ. ಇದು ರೇವಂತ್‌ಗೆ ಹೊಸ ಭರವಸೆ ಮೂಡಿಸಿದೆ. ಈಗ ರೇವಂತ್‌ಗೆ ಮಲೆನಾಡು ಕ್ಯಾನ್ಸರ್ ಆಸ್ಪತ್ರೆ ವೈದ್ಯರು ಚಿಕಿತ್ಸೆ ಮುಂದುವರಿಸಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಭೇಟಿಯಾಗಬೇಕು, ಅವರೊಂದಿಗೆ ಮಾತನಾಡಬೇಕು ಅನ್ನುವುದೇ ತನ್ನ ಕಟ್ಟಕಡೆಯ ಅಸೆ ಎಂದು ಕ್ಯಾನ್ಸರ್‌ನಿಂದ ಬಳಲುತ್ತಾ ಜೀವನ್ಮರಣ ಹೋರಾಟ ನಡೆಸುತ್ತಿರುವ ಅಭಿಮಾನಿಯೊಂದಿಗೆ ದರ್ಶನ್ ವಿಡಿಯೋ ಕಾಲ್ ಮಾಡಿ ಮಾತನಾಡಿದ್ದಾರೆ. ಈ ವೇಳೆ ಅಭಿಮಾನಿಗೆ ಧೈರ್ಯ ತುಂಬಿ ವಿಶ್ವಾಸ ಮೂಡಿಸಿದ್ದಾರೆ
Comments