ಟಾಲಿವುಡ್ ಗೆ ಕಾಲಿಟ್ಟು' ವೀರಮಾದೇವಿ'ಯಾದ ಸನ್ನಿ
ಮೊದಲ ಭಾರಿಗೆ ಟಾಲಿವುಡ್ ಗೆ ಕಾಲಿಟ್ಟ ಸನ್ನಿ ಯೋಧಳಾಗಿ `ವೀರಮಾದೇವಿ’ ಸಿನಿಮಾದಲ್ಲಿ ಹೋರಾಡಲಿದ್ದಾರೆ . ಸನ್ನಿ ಈ ಸಿನಿಮಾದಲ್ಲಿ ವಿಭಿನ್ನ ಪಾತ್ರದ ಮೂಲಕ ಮಿಂಚಲಿದ್ದಾರೆ. ತೆಲುಗು ಭಾಷೆಯಲ್ಲಿ ಮೊದಲ ಬಾರಿಗೆ ಅಭಿನಯಿಸುತ್ತಿರುವ ಸನ್ನಿ ಅವರು, ಸಿನಿ ಜೀವನದಲ್ಲಿ ಒಂದಷ್ಟು ಬದಲಾವಣೆಗಳನ್ನು ಬಯಸಿದ್ದಾರೆ.
ಸನ್ನಿ ಈಗಾಗಲೇ ಈ ಚಿತ್ರಕ್ಕೆ ಸಹಿ ಮಾಡಿದ್ದು, ಸದ್ಯ ಚೆನ್ನೈ ನಲ್ಲಿ ಈ ಚಿತ್ರ ಚಿತ್ರೀಕರಣ ನಡೆಯುತ್ತಿದೆ ಅಲ್ಲದೆ ಈ ಚಿತ್ರದ ನಿರ್ದೇಶಕರಾಗಿ ವಿಸಿ ವಾಡಿವುದೈಯಾನ್ ನಿರ್ದೇಶನ ಮಾಡಲಿದ್ದಾರೆ. ಇನ್ನು ಚಿತ್ರೀಕರಣ ಆರಂಭವಾಗಿದ್ದು, ಸನ್ನಿಯ ಮೊದಲ ತೆಲುಗು ಸಿನಿಮಾವಾಗಿದೆ. ಈ ಚಿತ್ರದಲ್ಲಿ ವೀರ ಯೋಧಳಾಗಿ ಶತ್ರು ಬಣಗಳ ವಿರುದ್ಧ ಹೋರಾಟ ಮಾಡಲಿದ್ದಾರೆ. ಯಾವಾಗ ಬಿಡುಗಡೆಯಾಗುತ್ತದೆ ಎಂಬುದರ ಬಗ್ಗೆ ಇನ್ನಷ್ಟೇ ತಿಳಿದುಬರಬೇಕಿದೆ. ಆದ್ರೆ ಸಿನಿಮಾ ನಿರ್ಮಾಪಕರು ಈ ಚಿತ್ರತಮಿಳು ಹಾಗೂ ಮಲೆಯಾಳಂನಲ್ಲೂ ಬಿಡುಗಡೆಯಾಗಬೇಕೆಂಬ ನಿರೀಕ್ಷೆಯಲ್ಲಿದ್ದಾರೆ
Comments