ಚಂದನ್ ಶೆಟ್ಟಿ ಗೆ ಚಾಲೆಂಜಿಂಗ್ ಸ್ಟಾರ್ ಕೊಟ್ಟ ಬಿಗ್ ಆಫರ್ ಏನು ಗೊತ್ತಾ?

ಬಿಗ್ ಬಾಸ್ -5 ನಲ್ಲಿ ಚಂದನ್ ಶೆಟ್ಟಿಯ ರ‍್ಯಾಪರ್ ಹಾಡುಗಳಿಗೆ ಕ್ಲೀನ್ ಬೋಲ್ಡ್ ಆಗದೆ ಇರುವವರು ಇಲ್ಲವೇ ಇಲ್ಲಾ ಎನ್ನಬಹುದು. ಇಷ್ಟೇ ಅಲ್ಲದೆ ಬಿಗ್ ಬಾಸ್ -5 ವಿನ್ನರ್ ಆಗಿ ತಮ್ಮ ಅಭಿಮಾನಿಗಳ ಮನದಲ್ಲಿ ಮನೆಮಾತಾ ಆಗಿರುವ ಚಂದನ್ 'ಮಾಸ್ಟರ್ ಡ್ಯಾನ್ಸರ್' ಕಾರ್ಯಕ್ರಮಕ್ಕೆ ಜಡ್ಜ್ ಆಗಿರುವ ಚಂದನ್ ಶೆಟ್ಟಿಯವರಿಗೆ ಒಂದು ದೊಡ್ಡ ಆಫರ್ ಹುಡುಕಿಕೊಂಡು ಬಂದಿದೆಯಂತೆ .
ಅದು ಚಾಲೆಂಜಿಂಗ್ ಸ್ಟಾರ್ ಕಡೆಯಿಂದ ಅನ್ನೋದು ಇನ್ನು ಇಂಟರಸ್ಟಿಂಗ್ ವಿಷ್ಯ. ಹೌದು ರ‍್ಯಾಪರ್ ಹಾಡುಗಳಿಂದ ಫೇಮಸ್ ಆದ ಚಂದನ್ ಶೆಟ್ಟಿಯವರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ತಮ್ಮ ಸಿನಿಮಾಗಳಿಗೆ ಮ್ಯೂಸಿಕ್ ಮಾಡುವ ಅವಕಾಶ ನೀಡಿದ್ದರಂತೆ. ಸದ್ಯಕ್ಕೆ ದಚ್ಚು ತಮ್ಮ 50 ನೇ ಕುರುಕ್ಷೇತ್ರ ಸಿನಿಮಾ ಚಿತ್ರೀಕರಣ ಮುಗಿಸಿಕೊಂಡು 51 ನೇ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿ ಯಾಗಲಿದ್ದಾರೆ. ದಾಸನ 52 ನೇ ಚಿತ್ರಕ್ಕೆ ರ‍್ಯಾಪರ್ ಚಂದನ್ ಶೆಟ್ಟಿಯವರು ಮ್ಯೂಸಿಕ್ ಮಾಡಲಿದ್ದಾರೆ ಎಂಬ ಸುದ್ದಿ ಗಾಂಧಿನಗರದತುಂಬೆಲ್ಲ ಹರಡಿದೆ.
Comments