ದರ್ಶನ್ ಲ್ಯಾಂಬರ್ಗಿನಿಯನ್ನೇ ಯಾಕೆ ತಗೊಂಡ್ರು ಗೊತ್ತಾ?

'ಲ್ಯಾಂಬರ್ಗಿನಿ' ಕಾರನ್ನು ಚಾಲೆಂಜಿಂಗ್ ಸ್ಟಾರ್ ಏಕೆ ಖರೀದಿಸಿದರು ಗೊತ್ತಾ..? ಇದರ ಹಿಂದೆ ಒಂದು ಇಂಟ್ರೆಸ್ಟಿಂಗ್ ಸ್ಟೋರಿ ಇದೆ. ಸದ್ಯಕ್ಕೆ ದರ್ಶನ್ ನಟಿಸ್ತಿರೋ ಬಿಗ್ ಬಜೆಟ್ ಚಿತ್ರ ಎಂದರೆ ಕುರುಕ್ಷೇತ್ರ. ಈ ಚಿತ್ರದಲ್ಲಿ ದೊಡ್ಡ ತಾರಾ ಬಳಗವೇ ಇದೆ.
ದರ್ಶನ್ ದುರ್ಯೋಧನನ ಪಾತ್ರ ನಿರ್ವಹಿಸಿದ್ರೆ ಮತ್ತೋರ್ವ ನಟ ಮುಖ್ಯಮಂತ್ರಿ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರ್, ಅಭಿಮನ್ಯು ಪಾತ್ರ ಮಾಡ್ತಿದ್ದಾರೆ. ನಿಖಿಲ್ ಬಳಿ ದುಬಾರಿ ಕಾರುಗಳ ದೊಡ್ಡ ಕಲೆಕ್ಷನ್ ಇದೆ. ಈ ವಿಷಯ ಎಲ್ರಿಗೂ ಗೊತ್ತಿರೋದೆ. ಕುರುಕ್ಷೇತ್ರ ಚಿತ್ರದ ಮೊದಲ ದಿನದ ಶೂಟಿಂಗ್‌ಗೆ ನಿಖಿಲ್ ತಮ್ಮ ಲ್ಯಾಂಬರ್ಗಿನಿ ಕಾರಲ್ಲಿ ಜುಮ್ ಅಂತ ಬಂದು ಇಳಿದ್ರಂತೆ. ಆಗ ಈ ಕಾರನ್ನು ಹತ್ತಿರದಿಂದ ನೋಡಿ ಗಮನಿಸಿದ ದಾಸ ಈ ಕಾರಿಗೆ ಫಿದಾ ಆಗಿ ಮರುದಿನವೇ ಲ್ಯಾಂಬರ್ಗಿನಿ ಕಾರ್ ಬುಕ್ ಮಾಡೇ ಬಿಟ್ರಂತೆ.
Comments