ಸಿನಿಮಾ ಬಿಡುಗಡೆ ಆನಿವರ್ಸರಿ ಬಗ್ಗೆ ನಿಮಗೆ ಗೊತ್ತಾ..?
ಮದುವೆ ಆನಿವರ್ಸರಿ, ಕಂಪೆನಿ ಆನಿವರ್ಸರಿ, ಫ್ರೆಂಡ್ಶಿಪ್ ಆನಿವರ್ಸರಿ ಸೆಲಬ್ರೇಟ್ ಮಾಡಿಕೊಳ್ಳುವುದು ನೋಡಿದೀವಿ ಇದೇನಪ್ಪ ಸಿನಿಮಾ ಆನಿವರ್ಸರಿ ಅಂತೀರಾ ಹೌದು ಸಿನಿಮಾ ಆನಿವರ್ಸರಿ ಮಾಡಲು ಹೊರಟಿರುವ ಆ ನಿರ್ದೇಶಕ ದುನಿಯಾ ಸೂರಿ.
ನಿರ್ದೇಶಕ ದುನಿಯಾ ಸೂರಿ ಈ ಹೊಸ ಆನಿವರ್ಸರಿ ಮಾಡೋಕೆ ಹೊರಟಿದ್ದಾರೆ. ಅಂದರೆ, 2007 ಫೆಬ್ರವರಿ 23 ಕ್ಕೆ ಸೂರಿಯನ್ನು ದುನಿಯಾ ಸೂರಿಯನ್ನಾಗಿಸಿದ ಚಿತ್ರ 'ದುನಿಯಾ' ಬಿಡುಗಡೆಯಾಗಿತ್ತು. ಅದು ನಾಯಕ ವಿಜಯ್, ನಿರ್ದೇಶಕ ಸೂರಿ ಸೇರಿದಂತೆ ಅನೇಕರಿಗೆ ಲೈಫ್ ಕೊಟ್ಟ ಚಿತ್ರ. ಈಗ ಅದೇ ದಿನ ಅಂದರೆ ದುನಿಯಾ ಬಿಡುಗಡೆಯಾದ ಫೆಬ್ರವರಿ 23 ರಂದೇ ತಮ್ಮ ಬಹುನಿರೀಕ್ಷಿತ 'ಟಗರು' ಸಿನಿಮಾವನ್ನು ಬಿಡುಗಡೆ ಮಾಡೋಕೆ ಸಜ್ಜಾಗಿದ್ದಾರೆ. ಆದರೆ ದುನಿಯಾ ಟೈಮ್‌ನಲ್ಲಿ ಇದ್ದ ಟೆನ್ಷನ್‌ಗಳು ಈಗಿಲ್ಲ. ಈಗ ನಾನು ಬರೀ ನಿರ್ದೇಶನ ನೋಡಿಕೊಂಡರೆ ಸಾಕು. ಆಗ ಬಹುತೇಕ ಎಲ್ಲಾ ಹೊಸಬರಾಗಿದ್ದರಿಂದ ಚಿತ್ರದ ಎಲ್ಲಾ ಕೆಲಸಗಳನ್ನು ನಾವೇ ನೋಡಿಕೊಳ್ಳಬೇಕಿತ್ತು ಎಂದು ಹಳೆಯ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ ಸೂರಿ.
Comments