ಅಭಿಮಾನಿಯ ಕೊನೆ ಆಸೆ ಈಡೇರಿಸುತ್ತಾರಾ ಚಾಲೆಂಜಿಂಗ್ ಸ್ಟಾರ್ ದರ್ಶನ್..!!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹುಟ್ಟುಹಬ್ಬದ ಸಂಭ್ರಮಕ್ಕಾಗಿ ಅಭಿಮಾನಿಗಳು ದಿನಗಳನ್ನು ಎಣಿಸುತ್ತಿದ್ದಾರೆ. ಆದರೆ ಮತ್ತೊಂದು ಕಡೆ ದರ್ಶನ್ ಅಪ್ಪಟ ಅಭಿಮಾನಿ ತನ್ನ ಜೀವನದ ಕೊನೆಯ ದಿನಗಳನ್ನು ಲೆಕ್ಕ ಹಾಕುತ್ತಿದ್ದಾರೆ.
ರೇವಂತ್ ಪಕ್ಕಾ ಚಾಲೆಂಜಿಂಗ್ ಸ್ಟಾರ್ ಅಭಿಮಾನಿ. ಎಲ್ಲರ ಹಾಗೆ ನೆಚ್ಚಿನ ಸ್ಟಾರ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಭಾಗಿ ಆಗಬೇಕಿದ್ದ ರೇವಂತ್ ತಮ್ಮ ಬದುಕಿನ ಕೊನೆಯ ಕ್ಷಣಗಳನ್ನ ಎಣಿಸುತ್ತಿದ್ದಾರೆ.ಚಾಲೆಂಜಿಂಗ್ ಸ್ಟಾರ್ ಅವರ ಕಟ್ಟಾ ಅಭಿಮಾನಿ ಸದ್ಯ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಶಿವಮೊಗ್ಗ ಮೂಲದ ರೇವಂತ್ ಕ್ಯಾನ್ಸರ್ ರೋಗಕ್ಕೆ ತುತ್ತಾಗಿರುವವರು. ತನ್ನ 20ನೇ ವಯಸ್ಸಿಗೆ ಕ್ಯಾನ್ಸರ್ ನಿಂದ ನೋವು ಅನುಭವಿಸುತ್ತಿರುವ ರೇವಂತ್ ಅವರಿಗೆ ತಮ್ಮ, ಅಕ್ಕ ಹಾಗೂ ಅಪ್ಪ ಅಮ್ಮ ಇದ್ದಾರೆ.ಮೂಳೆ ಕ್ಯಾನ್ಸರ್ ನಿಂದ ಬಳಲುತ್ತಿದ್ದ ರೇವಂತ್ ಬೆಂಗಳೂರಿಗೆ ಬಂದು ಚಿಕಿತ್ಸೆಯನ್ನು ಪಡೆದು ಹೋಗಿದ್ದರು. ಆದರೆ ಮತ್ತೆ ಕಾಣಿಸಿಕೊಂಡಿರುವ ಕ್ಯಾನ್ಸರ್ ಈ ಭಾರಿ ರೇವಂತ್ ಅವರನ್ನು ಬಿಡುವಂತೆ ಕಾಣುತ್ತಿಲ್ಲ.ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರೇವಂತ್ ಇಬ್ಬರ ಹುಟ್ಟುಹಬ್ಬವೂ ಇದೇ ತಿಂಗಳು. ಪ್ರತಿ ವರ್ಷ ದರ್ಶನ್ ಅವರ ಹುಟ್ಟುಹಬ್ಬಕ್ಕೆ ಶಿವಮೊಗ್ಗದಿಂದ ಬಂದು ಶುಭ ಹಾರೈಸುತ್ತಿದ್ದ ಅಭಿಮಾನಿ ಇನ್ಮುಂದೆ ದರ್ಶನ್ ಭೇಟಿ ಆಗಲು ಆಗುವುದಿಲ್ಲ. ಎಲ್ಲಾ ಅಭಿಮಾನಿಗಳು ಸಂಭ್ರಮದಲ್ಲಿ ಹುಟ್ಟುಹಬ್ಬ ಆಚರಣೆ ಮಾಡಿದರೆ ರೇವಂತ್ ಮಾತ್ರ ದುಖಃದಲ್ಲಿ ಇದ್ದಾರೆ.ವೈದ್ಯರು ಇನ್ನು ಮುಂದೆ ನಮ್ಮಿಂದ ಏನು ಮಾಡಲು ಸಾಧ್ಯವಿಲ್ಲ ಎಂದು ಕೈ ಚೆಲ್ಲಿದ್ದಾರೆ. ಇಂತಹ ಸ್ಥಿತಿಯಲ್ಲಿರುವ ರೇವಂತ್ ಅವರ ಕಡೆಯ ಆಸೆ ದರ್ಶನ್ ಅವರನ್ನು ನೋಡುವುದು. ಅದ್ದರಿಂದ ತಮ್ಮ ಪ್ರೀತಿಯ ಅಭಿಮಾನಿಯ ಕೊನೆ ಆಸೆಯನ್ನು ದಾಸ ದರ್ಶನ್ ಪೂರೈಸುತ್ತಾರಾ ನೋಡಬೇಕಾಗಿದೆ.
Comments