ವೈವಾಹಿಕ ಜೀವನಕ್ಕೆ ಕಾಲಿಡಲಿರುವ ಖ್ಯಾತ ನಟಿ ಶ್ರೇಯಾ ಸರಣ್ ..!!
2001ರ ತೆಲುಗಿನ ಇಷ್ಟಂ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಶ್ರೇಯಾ ಸರಣ್ ದಕ್ಷಿಣ ಭಾರತದ ಅನೇಕ ಚಿತ್ರಗಳಲ್ಲಿ ಅಭಿನಯಿಸಿ ಖ್ಯಾತ ನಟಿ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ತನ್ನ ಬಹು ಕಾಲದ ರಷ್ಯಾದ ಗೆಳೆಯನ ಜೊತೆ ಮಾರ್ಚ್ ತಿಂಗಳಲ್ಲಿ ಸಪ್ತಪದಿ ತುಳಿಯಲಿದ್ದಾರೆ. ಈ ಬಗ್ಗೆ ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ.
ದಕ್ಷಿಣ ಭಾರತದ ಖ್ಯಾತ ನಟಿ ಶ್ರೇಯಾ ಸರಣ್ ಅವರ ಸಮಯ,ತಮ್ಮ ಮದುವೆ ಬಗ್ಗೆ ತನ್ನ ಭಾವಿ ಪತಿಯ ತಂದೆ ತಾಯಿಯ ಜೊತೆ ಮಾತನಾಡುವ ನಿಟ್ಟಿನಲ್ಲಿ ಈಗಾಗಾಲೇ ಶ್ರೇಯಾ ರಷ್ಯಾಕ್ಕೆ ತೆರಳಿದ್ದಾರೆ ಎನ್ನಲಾಗಿದೆ. ತಮ್ಮ ಮದುವೆ ನಡೆಯುವ ಜಾಗವನ್ನು ಶ್ರೇಯಾ ಈಗಾಗಲೇ ಆಯ್ಕೆ ಮಾಡಿದ್ದು ಅವರು ರಾಜಸ್ಥಾನವನ್ನು ಮದುವೆಯ ತಾಣವನ್ನಾಗಿ ಆಯ್ಕೆ ಮಾಡಿರುವ ಶ್ರೇಯಾ ಅವರು ಮದುವೆಯ ಆ ಸುಂದರ ಘಳಿಗೆಗೆ ಕಾಯುತ್ತಿದ್ದಾರೆ ಎಂದು ಹೇಳಲಾಗಿದೆ. ಪ್ರಸ್ತುತ ಶ್ರೀಯಾ ಅವರು ತೆಲುಗಿನ ಮೋಹನ್ ಬಾಬು ಮತ್ತು ವಿಷ್ಣು ಮಂಚು ಅವರ ಜೊತೆ ನಟಿಸುತ್ತಿದ್ದಾರೆ. ಮಲೆಯಾಳಂ ಸಿನಿಮಾ ಸಾಲ್ಟ್ ಆಂಡ್ ಪೆಪ್ಪರ್ ನ ಹಿಂದಿ ರಿಮೇಕ್ ತಡ್ಕಾದಲ್ಲಿ ಶ್ರೇಯಾ ನಟಿಸುತ್ತಿದ್ದಾರೆ. ಇದಲ್ಲೇ ತೆಲುಗಿನ ವೀರ ಭೋಗ ವಸಂತ ರಾಯಲು ಎಂಬ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.
Comments