ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 51 ನೇ ಚಿತ್ರಕ್ಕೆ ಹೀರೋಯಿನ್ ಯಾರು ಗೊತ್ತಾ ?
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 51 ನೇ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದು, ಮತ್ತೊಬ್ಬ ಬೆಡಗಿ ಕೂಡ ಜೋಡಿ ಆಗಲಿದ್ದಾರಂತೆ.
ಹೌದು ಮೂಲಗಳ ಪ್ರಕಾರ ದರ್ಶನ್ ಅವರ 51 ನೇ ಚಿತ್ರಕ್ಕೆ ನವ ನಟಿ ತಾನ್ಯಾ ಹೋಪ್ ಆಯ್ಕೆ ಆಗಿದ್ದಾರೆ. ಮಂಗಳೂರು ಮೂಲದ ತಾನ್ಯಾ ಅವರು ಉಪೇಂದ್ರ ನಾಯಕತ್ವದ ಹೋಮ್ ಮಿನಿಸ್ಟರ್ ಚಿತ್ರದಲ್ಲಿ ಪ್ರಮುಖ ಪಾತ್ರ ನಿಭಾಯಿಸುತ್ತಿದ್ದಾರೆ. ದರ್ಶನ್ ನಾಯಕತ್ವದ 51 ನೇ ಚಿತ್ರಕ್ಕಾಗಿ ಕೆಲವೇ ದಿನಗಳ ಹಿಂದೆ ನಡೆದ ಆಡಿಷನ್ ನಲ್ಲಿ ಅವರು ಪಾಲ್ಗೊಂಡಿದ್ದರಂತೆ, ಅವರ ಪ್ರತಿಭೆ ಕಂಡು ಚಿತ್ರತಂಡದ ಸದಸ್ಯರು ಇಂಪ್ರೆಸ್ ಆಗಿದ್ದಾರೆ ಎನ್ನಲಾಗುತ್ತಿದೆ.
Comments