ಮೂರು ವರ್ಷದ ಬಳಿಕ ಸರ್ಪ್ರೈಸ್ ನೊಂದಿಗೆ ಚರಣ್ ರಾಜ್ ಸ್ಯಾಂಡಲ್ ವುಡ್ ಗೆ ಕಮ್ ಬ್ಯಾಕ್
'ರಥಾವರ' ಸಿನಿಮಾದಲ್ಲಿ ನಟಿಸಿದ್ದ ನಟ ಚರಣ್ ರಾಜ್ ಅವರು ಮೂರು ವರ್ಷ ಕಳೆದರು ಯಾವುದು ಸಿನಿಮಾ ಮಾಡಿರಲಿಲ್ಲ. ಆದರೆ ಈಗ ಮತ್ತೆ ಕನ್ನಡಕ್ಕೆ ಅವರು ಕಮ್ ಬ್ಯಾಕ್ ಮಾಡಿದ್ದಾರೆ.
ವಿಶೇಷ ಅಂದರೆ ತಮ್ಮ ಬ್ಯಾಕ್ ಜೊತೆ ಜೊತೆಗೆ ಒಂದು ಅಚ್ಚರಿಯ ಸುದ್ದಿ ಕೊಟ್ಟಿದ್ದಾರೆ. ಚರಣ್ ರಾಜ್ ಈಗ ತಮ್ಮ ಮಗನನ್ನು ಲಾಂಚ್ ಮಾಡುವ ತಯಾರಿ ನಡೆಸಿದ್ದಾರೆ. ನಿನ್ನೆಯಷ್ಟೆ ನಟ ವಿನೋದ್ ಅಳ್ವಾ ತಮ್ಮ ಪುತ್ರರನ್ನು ಚಿತ್ರರಂಗಕ್ಕೆ ಕರೆತರುವ ಸುದ್ದಿ ಬಂದಿತ್ತು. ಇಷ್ಟು ದಿನ ಕಲಾವಿದನಾಗಿ ಪರದೆ ಮೇಲೆ ಕಾಣಿಸಿಕೊಳ್ಳುತ್ತಿದ್ದ ಚರಣ್ ರಾಜ್ ಈಗ ಒಂದು ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರೆ. ಈ ಸಿನಿಮಾ ಮರ್ಡರ್ ಮಿಸ್ಟರ್ ಆಗಿದ್ದು, ತಾವೇ ಕಥೆ ಬರೆದಿದ್ದಾರೆ. ತಮ್ಮ ನಿರ್ದೇಶನದ ಹೊಸ ಸಿನಿಮಾದಲ್ಲಿ ತಮ್ಮ ಮಗನಿಗೂ ಒಂದು ಪಾತ್ರ ನೀಡಿರುವ ಚರಣ್ ರಾಜ್ ಈ ಚಿತ್ರದ ಮೂಲಕ ಅವರ ಮಗನನ್ನು ಚಿತ್ರರಂಗಕ್ಕೆ ಪರಿಚಯ ಮಾಡುತ್ತಿದ್ದಾರೆ. ಈ ಸಿನಿಮಾದ ಒಂದು ಹಾಡಿನಲ್ಲಿ ಚರಣ್ ರಾಜ್ ಪುತ್ರ ತೇಜ್ ಕಾಣಿಸಿಕೊಳ್ಳಲಿದ್ದಾರೆ. ಇದು ಸಿನಿಮಾದ ಹೈಲೆಟ್ ಹಾಡು ಆಗಿರಲಿದೆಯಂತೆ. ಏಪ್ರಿಲ್ 27ಕ್ಕೆ ಚರಣ್ ರಾಜ್ ಅವರ ಹುಟ್ಟುಹಬ್ಬ ಇದ್ದು ಅದೇ ದಿನ ಅವರ ಹೊಸ ಸಿನಿಮಾಗೆ ಚಾಲನೆ ಸಿಗಲಿದೆ.
Comments