ಕಾಲಿವುಡ್ ಸ್ಟಾರ್ ಎಂಟ್ರಿ ಕೊಡಲಿದ್ದಾರೆ ಅನುಪಮ ಗೌಡ
ಒಂದು ಕಡೆ 'ಬಿಗ್ ಬಾಸ್' ಗೆದ್ದ ಚಂದನ್ ಶೆಟ್ಟಿ ಕಲರ್ಸ್ ಸೂಪರ್ ವಾಹಿನಿಯ 'ಮಾಸ್ಟರ್ ಡ್ಯಾನ್ಸ್' ಕಾರ್ಯಕ್ರಮದ ತೀರ್ಪುಗಾರ ಆಗಿದ್ದಾರೆ. ಉಳಿದ ಸ್ಪರ್ಥಿಗಳಾಗಿದ್ದ ಅನುಪಮ ಗೌಡ, ದಿವಾಕರ್, ನಿವೇದಿತಾ, ಜಿಕೆ ಸೇರಿದಂತೆ ಅನೇಕರಿಗೆ ಈಗ ಹೊಸ ಸಿನಿಮಾ ಅವಕಾಶಗಳು ಹೆಚ್ಚಾಗುತ್ತಿದೆ. ಅದರಲ್ಲಿಯೂ ನಟಿ ಅನುಪಮ ಗೌಡಗೆ ಈಗ ದೊಡ್ಡ ಆಫರ್ ಬಂದಿದೆಯಂತೆ.
'ಬಿಗ್ ಬಾಸ್' ಮನೆಯಿಂದ ಹೊರ ಬಂದ ಅನುಪಮ ಗೌಡ ಈಗ ಎರಡ್ಮೂರು ಸಿನಿಮಾಗಳ ಆಫರ್ ಹೊಂದಿದ್ದಾರೆ. ಅನುಪಮ ಗೌಡಗೆ ಕಾಲಿವುಡ್ ನಿಂದ ಕರೆ ಬಂದಿದೆಯಂತೆ. ತಮಿಳಿನ ಸ್ಟಾರ್ ನಟನ ಜೊತೆಗೆ ಅನುಪಮ ಸ್ಕ್ರೀನ್ ಶೇರ್ ಮಾಡಲಿದ್ದು, ಆ ನಟ ಯಾರು ಎಂಬುದನ್ನು ಸದ್ಯಕ್ಕೆ ಅವರು ಬಹಿರಂಗ ಪಡಿಸಿಲ್ಲ. ಈಗಾಗಲೇ ಜೆ.ಕೆ ಮತ್ತು ಅನುಪಮ ಕಾಂಬಿನೇಶನ್ ನಲ್ಲಿ 'ಆ ಕರಾಳ ರಾತ್ರಿ' ಚಿತ್ರ ಬರುತ್ತಿದೆ. ದಯಾಳ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು, ಇದೇ ತಿಂಗಳ 19ಕ್ಕೆ ಸಿನಿಮಾ ಲಾಂಚ್ ಆಗಲಿದೆ. ಇಷ್ಟು ದಿನ ಧಾರಾವಾಹಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಅನುಪಮ 'ನಗಾರಿ' ಎಂಬ ಒಂದು ಸಿನಿಮಾ ಮಾಡಿದ್ದರು. ಆದರೆ ಈಗ 'ಬಿಗ್ ಬಾಸ್' ಮೂಲಕ ಸಖತ್ ಫೇಮ್ ಗಳಿಸಿದ್ದು, ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡುವ ಯೋಜನೆ ಹಾಕಿಕೊಂಡಿದ್ದಾರೆ.
Comments