ಕೊನೆಗೂ ಮದುವೆಗೆ ಗ್ರೀನ್ ಸಿಗ್ನಲ್ ಕೊಟ್ಟ ಅನುಷ್ಕಾ ಶೆಟ್ಟಿ

'ಬಾಹುಬಲಿ' ನಟ ಪ್ರಭಾಸ್ ಅವರ ಜೊತೆ ಲವ್ವು-ಮದುವೆ ಎಂಬ ವದಂತಿಗಳಿಂದ ಬೇಸತ್ತಿದ್ದ ಅನುಷ್ಕಾ ಮದುವೆ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಹೋದಲ್ಲಿ, ಬಂದಲ್ಲೇಲ್ಲ ಮದುವೆ ಯಾವಾಗ,,,,,ಮದುವೆ ಯಾವಾಗ.....ಎಂದು ಕೇಳುತ್ತಿದ್ದವರಿಗೆ ಅನುಷ್ಕಾ ನೇರವಾಗಿ ಉತ್ತರಿಸಿದ್ದಾರೆ. ಸದಾ ಮದುವೆ ಬಗ್ಗೆ ಪ್ರಶ್ನೆ ಮಾಡಿದ್ರೆ, ಉತ್ತರ ನೀಡದೇ ಹೋಗುತ್ತಿದ್ದ ಅನುಷ್ಕಾ ಈಗ ಖುದ್ದು ಮದುವೆ ವಿಚಾರದ ಬಗ್ಗೆ ಮಾತನಾಡಿದ್ದಾರೆ.
''ನನಗೆ ಮದುವೆ ಮೇಲೆ ನಂಬಿಕೆ ಇದೆ. ಆದ್ರೆ, ಸದ್ಯಕ್ಕೆ ಮದುವೆ ಆಗುವ ಯೋಚನೆ ಇಲ್ಲ. ನನ್ನ ಜತೆ ಯಾರೂ ಕನೆಕ್ಟ್ ಆಗ್ತಾರೋ ಅವರನ್ನ ಮದುವೆ ಆಗ್ತೀನಿ. ನಮ್ಮ ತಂದೆ-ತಾಯಿ ಕೂಡ ಮದುವೆ ಆಗು ಎಂದು ಒತ್ತಾಯಿಸುತ್ತಿದ್ದಾರೆ. ಒಳ್ಳೆ ಸಮಯಕ್ಕಾಗಿ ಕಾಯುತ್ತಿದ್ದೇನೆ'' ಎಂದು ಅನುಷ್ಕಾ ತಿಳಿಸಿದ್ದಾರೆ. ಅನುಷ್ಕಾ ಶೆಟ್ಟಿ ಸದ್ಯದಲ್ಲೇ ಸಿನಿಮಾ ನಿರ್ಮಾಣ ಮಾಡುತ್ತಾರೆ ಎನ್ನಲಾಗುತ್ತಿದೆ. ಈ ಕುರಿತು ಮಾತನಾಡಿದ ಅನುಷ್ಕಾ ''ಅದು ಸುಳ್ಳು. ನನಗೆ ಬಿಸಿನೆಸ್ ಬಗ್ಗೆ ಗೊತ್ತಿಲ್ಲ. ನಾನು ಉದ್ಯಮಿ ಅಲ್ಲ. ನನಗೆ ಸರಿಯಾಗಿ ನಿರ್ವಹಣೆ ಮಾಡಲು ಬರಲ್ಲ. ಹೀಗಾಗಿ, ನಾನು ಸಿನಿಮಾ ನಿರ್ಮಾಣ ಮಾಡಲ್ಲ'' ಎಂದಿದ್ದಾರೆ. ಸದ್ಯ, ಭಾಗಮತಿ ಚಿತ್ರ ಯಶಸ್ವಿ ಪ್ರದರ್ಶನವಾಗ್ತಿದೆ. ಬಾಕ್ಸ್ ಆಫೀಸ್ ನಲ್ಲೂ ಒಳ್ಳೆ ಕಲೆಕ್ಷನ್ ಮಾಡ್ತಿದೆ. ಬೇರೆ ಯಾವ ಚಿತ್ರವನ್ನ ಒಪ್ಪಿಕೊಂಡಿಲ್ಲ ಎಂದು ಬಹಿರಂಗಪಡಿಸಿದ್ದಾರೆ.
Comments