ಭಾವನಾ-ನವೀನ್ ಆರತಕ್ಷತೆಯಲ್ಲಿ ಸಿನಿ ತಾರೆಯರ ದಂಡು

ಬಹುಭಾಷಾ ನಟಿ ಭಾವನಾ ಮೆನನ್ ಹಾಗೂ ನವೀನ್ ರ ಮದುವೆಯಾಗಿ ಹದಿನೈದು ದಿನಗಳು ಕಳೆದಿವೆ. ನಿನ್ನೆ ಬೆಂಗಳೂರಿನಲ್ಲಿ ಆರತಕ್ಷತೆ ಕಾರ್ಯಕ್ರಮ ಇಟ್ಟುಕೊಂಡಿತ್ತು ಈ ಜೋಡಿ. ಸಧ್ಯ ನವೀನ್ ಬೆಂಗಳೂರಿನ ನಿವಾಸಿ ಆಗಿರುವುದರಿಂದ ಇಲ್ಲಿನ ಸಿನಿಮಾ ಹಾಗೂ ಬಂದುಬಾಂಧವರಿಗಾಗಿ ಆರತಕ್ಷತೆ ಕಾರ್ಯಕ್ರಮ ನಡೆದಿದೆ.
ನವೀನ್ ಬೆಂಗಳೂರಿನ ನಿವಾಸಿಯಾಗಿರುವುದರಿಂದ ಇಲ್ಲಿನ ಸ್ನೇಹಿತರು ಹಾಗೂ ಸಿನಿಮಾರಂಗದ ಗಣ್ಯರಿಗಾಗಿ ಅದ್ಧೂರಿಯಾಗಿ ಭಾನುವಾರ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಆರತಕ್ಷತೆ ಆಯೋಜಿಸಿದ್ದರು. ಭಾವನಾ ಅಭಿನಯಿಸಿದ ಚಿತ್ರಗಳಲ್ಲಿ ಕೆಲಸ ಮಾಡಿದವರು, ನವೀನ್ ಕುಟುಂಬಸ್ಥರು ಮತ್ತು ಸ್ನೇಹಿತರಷ್ಟೇ ಆರತಕ್ಷತೆಯಲ್ಲಿ ಭಾಗವಹಿಸಿದ್ದರು. ಆರತಕ್ಷತೆಯಲ್ಲಿ ಶಿವ ರಾಜ್ ಕುಮಾರ, ಅಂಬರೀಶ್, ಪಾರುಲ್ ಯಾದವ್, ಮಾನ್ವಿತಾ ಹರೀಶ್, ಪ್ರಿಯಾ ಮಣಿ, , ಅವಿನಾಶ್ ಮಾಳವಿಕ ಇತರರು ಭಾಗವಹಿಸಿದ್ದರು. ಸಧ್ಯದಲ್ಲಿಯೇ ಭಾವನಾ ಅಭಿನಯದ "ಟಗರು" ಚಿತ್ರ ತೆರೆ ಕಾಣಲು ಸಜ್ಜಾಗುತ್ತಿದೆ.
Comments