ಶಿವಣ್ಣನ 'ಟಗರು' ಆಗಮನಕ್ಕೆ ಮುಹೂರ್ತ ಫಿಕ್ಸ್

ಸೆಂಚುರಿಸ್ಟಾರ್ ಶಿವರಾಜ್ ಕುಮಾರ್ ಅಭಿನಯದ 'ಟಗರು' ಸಿನಿಮಾದ ಬಿಡುಗಡೆಯ ದಿನ ಪದೇ ಪದೇ ಮುಂದಕ್ಕೆ ಹೋಗುತ್ತಲೇ ಇತ್ತು. ಆದರೆ ಇದೀಗ ಅಂತಿಮವಾಗಿ ಶಿವಣ್ಣನ 'ಟಗರು' ಆಗಮನಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಈಗಾಗಲೇ ಟ್ರೈಲರ್, ಹಾಡುಗಳ ಮೂಲಕ ಜನಪ್ರಿಯವಾಗಿರುವ 'ಟಗರು' ಚಂದನವನದಲ್ಲಿ ದೊಡ್ಡ ನಿರೀಕ್ಷೆ ಹುಟ್ಟಿಸಿರುವಿದು ಸುಳ್ಳಲ್ಲ. ದುನಿಯಾ ಸೂರಿ ನಿರ್ದೇಶನದ ಈ ಚಿತ್ರ ಮೊದಲೇ ಹೇಳಿದಂತೆ ಫೆಬ್ರವರಿ 23 ರಂದು ಚಿತ್ರ ತೆರೆ ಕಾಣಲಿದೆ.
ಉಳಿದಂತೆ ಮಾನ್ವಿತ ಹರೀಶ್ ಮತ್ತು ಭಾವನಾ ನಾಯಕಿಯರಾಗಿ ಅಭಿನಯಿಸಿದ್ದು ಧನಂಜಯ್ ಮತ್ತು ವಸಿಷ್ಠ ಸಿಂಹ ಖಳನಾಯಕರಾಗಿ ಮಿಂಚಿದ್ದಾರೆ. ಚರಣ್ ರಾಜ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಎಲ್ಲದಕ್ಕಿಂತಲೂ ಮುಖ್ಯವಾದ ಸಂಗತಿ ಎಂದರೆ 'ಟಗರು' ಚಿತ್ರವನ್ನ ನೋಡಲು ತೆಲುಗಿನ ಖ್ಯಾತ ನಿರ್ದೇಶಕ ಪೂರಿ ಜಗನ್ನಾಥ್ ಆಗಮಿಸಲಿದ್ದಾರೆ.
Comments