ಎಲ್ಲರಲ್ಲೂ ಕುತೂಹಲ ಮೂಡಿಸಿರುವ ಚಿರಂಜೀವಿ ಸರ್ಜಾರ ಲುಕ್...!

ಚಿರಂಜೀವಿ ಸರ್ಜಾ ಅಭಿನಯದ ಸಂಹಾರ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಸರ್ಜಾ ರ ಲುಕ್ ಎಲ್ಲರಲ್ಲೂ ಕುತೂಹಲ ಮೂಡಿಸಿದೆ. ಹೌದು, ಕೆಲ ದಿನಗಳ ಹಿಂದೆ ಟೀಸರ್ ಬಿಡುಗಡೆಯಾಗಿತ್ತು. ಟೀಸರ್ ನೋಡಿ ಬಹಳ ಜನ ಮೆಚ್ಚಿದ್ದರು. ಮನು ಎಂಟರ್ ಪ್ರೈಸಸ್ ಬ್ಯಾನರ್ ನಡಿ ಎ.ವೆಂಕೆಟೇಶ್ ಹಾಗೂ ಆರ್.ಸುಂದರ್ ಕಾಮರಾಜು ನಿರ್ಮಿಸುತ್ತಿರುವ ಸಂಹಾರ ಚಿತ್ರ ಟ್ರೇಲರ್ ಬಿಡುಡೆಯಾಗಿ ಮತ್ತಷ್ಟು ಕುತೂಹಲ ಹುಟ್ಟಿಸಿದೆ
ಟ್ರೇಲರ್ ನೋಡುತ್ತಿದ್ದಂತೆ ಇದೊಂದು ಸಸ್ಪನ್ಸೆ ಥ್ರಿಲ್ಲರ್ ಕಥೆ ಎಂದು ತಿಳಿಯುತ್ತದೆ. ಗುರು ದೇಶಪಾಂಡೆ ಚಿತ್ರವನ್ನು ನಿರ್ದೇಶಿಸಿದ್ದಾರೆ. ಹರಿಪ್ರಿಯಾ, ಕಾವ್ಯಾಶೆಟ್ಟಿ, ಚಿಕ್ಕಣ್ಣ, ಧರ್ಮ, ಅರುಣಾ ಬಾಲ್ ರಾಜ್ ಮುಂತಾದವರು ತಾರಾಗಣದಲ್ಲಿದ್ದಾರೆ.
Comments