'ಜೆಕೆ'ಯ ಹೊಸ ಚಿತ್ರಕ್ಕೆ ಜೋಡಿಯಾಗಲಿರುವ ನಟಿ ಯಾರು ಗೊತ್ತಾ?
'ಬಿಗ್ ಬಾಸ್'ನಿಂದ ಹೊರ ಬಂದ ಬಳಿಕ ಜಯರಾಂ ಕಾರ್ತಿಕ್(ಜೆ.ಕೆ.) ಅವರು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. 'ಬಿಗ್ ಬಾಸ್' ಸೀಸನ್ 5 ರಲ್ಲಿ ಗೆಲ್ಲುವ ಸ್ಪರ್ಧಿ ಎಂದೇ ಹೇಳಲಾಗಿದ್ದ ಜೆ.ಕೆ. 3 ನೇ ಸ್ಥಾನ ಗಳಿಸಿದ್ದಾರೆ. ಸಿನಿಮಾ, ಕಿರುತೆರೆ ಮೂಲಕ ಅಭಿಮಾನಿಗಳನ್ನು ಸೆಳೆದಿರುವ ಅವರು, 'ಬಿಗ್ ಬಾಸ್'ನಲ್ಲಿ ತಮ್ಮದೇ ಆದ ಶೈಲಿಯಿಂದ ಗಮನಸೆಳೆದಿದ್ದರು.
'ಬಿಗ್ ಬಾಸ್'ನಿಂದ ಹೊರ ಬಂದ ನಂತರ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. 'ಬಿಗ್ ಬಾಸ್' ಮನೆಯಲ್ಲಿ ಸುಮಾರು 10 ಕೆ.ಜಿ. ತೂಕ ಕಳೆದುಕೊಂಡಿದ್ದ ಜೆಕೆ, ಸಿನಿಮಾಗಳಿಗಾಗಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ತಮ್ಮ ಹಿಂದಿನ ಸ್ಥಿತಿಗೆ ಮರಳಲು ವರ್ಕೌಟ್ ಮಾಡ್ತಿದ್ದಾರೆ.'ಮೇ 1' ಸೇರಿದಂತೆ 2 ಚಿತ್ರಗಳನ್ನು ಜೆಕೆ ಅವರು ಪೂರ್ಣಗೊಳಿಸುತ್ತಿದ್ದು, ಇದರೊಂದಿಗೆ 'ಬಿಗ್ ಬಾಸ್' ಸ್ಪರ್ಧಿಗಳೊಂದಿಗೆ ಚಿತ್ರ ಮಾಡಲಿದ್ದಾರೆ.ಸ್ಪರ್ಧಿಯಾಗಿದ್ದ ದಯಾಳ್ ಪದ್ಮನಾಭ್ ಅವರು 2 ಸ್ಕ್ರಿಪ್ಟ್ ಗಳನ್ನು ರೆಡಿಮಾಡಿಕೊಂಡಿದ್ದು, ಅದರಲ್ಲಿ ಒಂದರಲ್ಲಿ ಜೆಕೆ ಹಾಗೂ ಅನುಪಮಾ ಗೌಡ ಜೊತೆಯಾಗಿ ನಟಿಸಲಿದ್ದಾರೆ. 'ಬಿಗ್ ಬಾಸ್'ನಲ್ಲಿ ಸ್ಪರ್ಧಿಯಾಗಿದ್ದ ಅನುಪಮಾ ಗೌಡ ಅವರೊಂದಿಗೆ ಜೆಕೆ ಹೊಸ ಸಿನಿಮಾ ಸೆಟ್ಟೇರಲಿದೆ.
Comments