ರಣವೀರ್ ಸಿಂಗ್ ಹಾಗೂ ಬಾಲಿವುಡ್ ಬಾದ್ ಶಾ ಶಾರುಕ್ ನಡುವೆ ಟ್ವೀಟರ್ ಚರ್ಚೆ

ಪದ್ಮಾವತ್ ಚಿತ್ರ ತನ್ನ ಯಶಸ್ವಿ ಪಯಣ ಮುಂದುವರೆಸಿದೆ. ದೇಶ-ವಿದೇಶಗಳಲ್ಲಿ ಬಿಡುಗಡೆಯಾಗಿರುವ ಚಿತ್ರ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದೆ. ಈ ಮಧ್ಯೆ ಪದ್ಮಾವತ್ ಚಿತ್ರದಲ್ಲಿ ಖಿಲ್ಜಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ರಣವೀರ್ ಸಿಂಗ್ ಹಾಗೂ ಬಾಲಿವುಡ್ ಬಾದ್ ಶಾ ಶಾರುಕ್ ಟ್ವೀಟರ್ ಚರ್ಚೆಯಲ್ಲಿದೆ.
ರಣವೀರ್ ಸಿಂಗ್ ತಮ್ಮ ಅಧಿಕೃತ ಟ್ವೀಟರ್ ನಲ್ಲಿ ಶಾರುಕ್ ಖಾನ್ ಗೆ ಟ್ವಿಟ್ ಮಾಡಿದ್ದರು. ಪದ್ಮಾವತ್ ಚಿತ್ರ ನೋಡಿದ್ರಾ ಎಂದು ಪ್ರಶ್ನೆ ಮಾಡಿದ್ದರು. ಇದಕ್ಕೆ ಶಾರುಕ್ ಭಿನ್ನವಾಗಿ ಉತ್ತರ ನೀಡಿದ್ದಾರೆ. ನೀವು ಖಿಲ್ಜಿ ಪಾತ್ರದಲ್ಲಿದ್ದ ಕಾರಣ ನಾನು ನಿಮ್ಮನ್ನು ಗುರುತಿಸಲೇಯಿಲ್ಲ. ಚಿತ್ರ ನೋಡಿದ್ದೇನೆ. ಅದ್ಭುತ ಚಿತ್ರವೆಂದು ಶಾರುಕ್ ಖಾನ್ ರೀಟ್ವಿಟ್ ಮಾಡಿದ್ದಾರೆ. ಶಾರುಕ್ ಖಾನ್ ನಿಜವಾಗ್ಲೂ ಚಿತ್ರ ನೋಡಿದ್ದಾರಾ ಎಂಬ ಪ್ರಶ್ನೆ ಈಗ್ಲೂ ಅಭಿಮಾನಿಗಳನ್ನು ಕಾಡುತ್ತಿದೆ. ಅನೇಕ ಅಭಿಮಾನಿಗಳು ಚಿತ್ರ ನೋಡಿದ್ದು ನಿಜವಾ ಎಂದು ಶಾರುಕ್ ಗೆ ಪ್ರಶ್ನೆ ಮಾಡಿದ್ದಾರೆ.
Comments