ಅಜ್ಜಿಯ ಪ್ರೀತಿಗೆ ಮನಸೋತ ಸುದೀಪ್, ಈ ಅಜ್ಜಿ ಬಗ್ಗೆ ಏನಂದ್ರು?

ಇಲ್ಲೊಬ್ಬ 82 ವರ್ಷದ ಅಪರೂಪದ ಅಜ್ಜಿ ಕಿಚ್ಚನಿಗೆ ಮನಸೋತಿದ್ದಾರೆ. ಸುದೀಪ್ ಬಿಗ್ ಬಾಸ್ ಶೋ ನಿರೂಪಣೆ ಮಾಡುವ ಸ್ಟೈಲ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಿಚ್ಚನ 22 ವರ್ಷದ ಸಿನಿ ಜರ್ನಿಗೆ ಶುಭಾಶಯ ತಿಳಿಸಿರುವ ಅಜ್ಜಿ, ಸುದೀಪ್ ಅವರನ್ನ ಮನೆಗೆ ಆಹ್ವಾನಿಸಿದ್ದಾರೆ.
ನನಗೆ 82 ವರ್ಷ, ನನ್ನ ಹೆಸರು ಪದ್ಮಾ ..ಕಳೆದ ಐದು ವರ್ಷದಿಂದ ಬಿಗ್ ಬಾಸ್ ನೋಡುತ್ತಿದ್ದೇನೆ. ತುಂಬಾ ಚೆನ್ನಾಗಿ ಮೂಡಿ ಬರುತ್ತೆ. ಅದರಲ್ಲೂ ವಾರದ ಕೊನೆಯಲ್ಲಿ ನೀವೇ ಬಂದು ಮಾತನಾಡುವುದು ನನಗೆ ತುಂಬ ಖುಷಿಯಾಗುತ್ತೆ. ''ನೀವು ಶ್ರೀಮಂತ ಕುಟುಂಬದಲ್ಲಿ ಹುಟ್ಟಿದ್ದರೂ, ಸ್ವಂತ ಪರಿಶ್ರಮದಿಂದ ಮೇಲೆ ಬಂದಿದ್ದೀರಾ. ತುಂಬಾ ಸಂತೋಷ. ಸಮಾಜದಲ್ಲಿ ಒಳ್ಳೆ ಹೆಸರು ಪಡೆದುಕೊಂಡಿದ್ದೀರಾ. ಕೆಲವರಿಗೆ ಸಹಾಯವನ್ನ ಕೂಡ ಮಾಡುತ್ತೀರಾ. ಕಣ್ಣು ಇಲ್ಲದವರಿಗೆ ಶ್ರಯ ಕೊಟ್ಟು ಸಾಕುತ್ತಿದ್ದೀರಾ. ನಿಮ್ಮ ತಂದೆ-ತಾಯಿಯನ್ನ ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದೀರಾ ಅದು ಸಂತೋಷ. ನಿಮ್ಮನ್ನು, ನಿಮ್ಮ ಕುಟುಂಬದವರನ್ನ ಆ ದೇವರು ಚೆನ್ನಾಗಿ ಇಟ್ಟಿರಲಿ''. ಇನ್ನು ಅಜ್ಜಿಯ ಪ್ರೀತಿಯ ಮಾತುಗಳಿಗೆ ಕರಗಿದ ಸುದೀಪ್ ಮೂಕ ವಿಸ್ಮಿತರಾಗಿದ್ದಾರೆ. ಅಜ್ಜಿಯ ಮಾತಿಗೆ ಗೌರವ ಕೊಟ್ಟು, ಮನೆಗೆ ಬರುವುದಾಗಿ ಟ್ವಿಟ್ಟರ್ ನಲ್ಲಿ ಕೃತಜ್ಞತೆ ತಿಳಿಸಿದ್ದಾರೆ. ಇನ್ನು ಅಜ್ಜಿಯ ಪ್ರೀತಿಯ ಮಾತುಗಳಿಗೆ ಕರಗಿದ ಸುದೀಪ್ ಮೂಕ ವಿಸ್ಮಿತರಾಗಿದ್ದಾರೆ. ಅಜ್ಜಿಯ ಮಾತಿಗೆ ಗೌರವ ಕೊಟ್ಟು, ಮನೆಗೆ ಬರುವುದಾಗಿ ಟ್ವಿಟ್ಟರ್ ನಲ್ಲಿ ಕೃತಜ್ಞತೆ ತಿಳಿಸಿದ್ದಾರೆ.
Comments