ಅಪಘಾತದಿಂದ ಪಾರಾದ ಮಂಡ್ಯ ರಮೇಶ್

ನಟ ಮಂಡ್ಯ ರಮೇಶ್ ಅವರ ಕಾರು ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಅಪಘಾತಕ್ಕೆ ಈಡಾಗಿದ್ದು ಕೂದಲೆಳೆಯ ಅಂತರದಲ್ಲಿ ಮಂಡ್ಯ ರಮೇಶ್ ಪಾರಾಗಾಗಿದ್ದಾರೆ. ಮಂಡ್ಯ ರಮೇಶ್ ಅವರ ಕಾರು ಶ್ರೀರಂಗಪಟ್ಟಣ ದ ಕೆ.ಶೆಟ್ಟಿಹಳ್ಳಿ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದು ಬೋರಲು ಬಿದ್ದಿದೆ. ಆದರೆ ಮಂಡ್ಯ ರಮೇಶ್‌ಗೆ ಯಾವುದೇ ಅಪಾಯ ಆಗಿಲ್ಲ.
ಕಾರನ್ನು ಮಂಡ್ಯ ರಮೇಶ್ ಅವರೇ ಚಲಾಯಿಸುತ್ತಿದ್ದರು. ಮಜಾಟಾಕೀಸ್ ಕಾರ್ಯಕ್ರಮದ ಚಿತ್ರೀಕರಣ ಮುಗಿಸಿ ಬೆಂಗಳೂರಿನಿಂದ ಮೈಸೂರಿಗೆ ವಾಪಾಸ್ಸಾಗುತ್ತಿದ್ದ ಸಂದರ್ಭ ಈ ಘಟನೆ ನಡೆದಿದೆ. ಸಣ್ಣ ಪುಟ್ಟ ಗಾಯಗಳಾಗಿರುವ ಮಂಡ್ಯ ರಮೇಶ್ ಅವರನ್ನು ಸ್ಥಳಿಯರು ಆಸ್ಪತ್ರೆಗೆ ಸೇರಿಸಿದ್ದರೆ. ಅಪಘಾತ ಕುರಿತು ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments