ಕಹಿ ಘಟನೆಯೊಂದನ್ನು ಮೆಲುಕು ಹಾಕಿದ ದೀಪಿಕಾ ಪಡುಕೋಣೆ
ಪದ್ಮಾವತ್ ಚಿತ್ರದ ವಿವಾದಗಳಿಂದ ನಟಿ ದೀಪಿಕಾ ಪಡುಕೋಣೆ ಸಾಕಷ್ಟು ನೊಂದಿದ್ದರು. ಅಷ್ಟೇ ಅಲ್ಲ ದೀಪಿಕಾಳನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಕೂಡ ಹಾಕಲಾಗಿತ್ತು. ಹಾಗಾಗಿ ದೀಪಿಕಾಗೆ ಹೆಚ್ಚಿನ ಭದ್ರತೆ ಒದಗಿಸಲಾಗಿತ್ತು. ವಿವಿಧ ಈವೆಂಟ್ ಗಳಲ್ಲಿ ಎಂಟ್ರಿ ಹಾಗೂ ಎಕ್ಸಿಟ್ ಗೆ ದೀಪಿಗೆ ಪ್ರತ್ಯೇಕ ವ್ಯವಸ್ಥೆಯನ್ನು ಮಾಡಲಾಗುತ್ತಿತ್ತು. ಆದ್ರೆ ಇಂತಹ ಭಯ ಹೊಸದೇನೂ ಅಲ್ಲ ಎಂದಿರೋ ನಟಿ, ಹಲವು ವರ್ಷಗಳ ಹಿಂದೆ ನಡೆದ ಕಹಿ ಘಟನೆಯೊಂದನ್ನು ಮೆಲುಕು ಹಾಕಿದ್ದಾರೆ.
ಆಗ ದೀಪಿಕಾಗೆ 14-15 ವರ್ಷ. ಒಮ್ಮೆ ರೆಸ್ಟೋರೆಂಟ್ ನಲ್ಲಿ ಊಟ ಮುಗಿಸಿ ಕುಟುಂಬದವರೊಂದಿಗೆ ತೆರಳುತ್ತಿದ್ರು. ತಂದೆ ಹಾಗೂ ಸಹೋದರಿ ಮುಂದೆ ನಡೆಯುತ್ತಿದ್ರೆ, ಅವರ ಹಿಂದೆ ದೀಪಿಕಾ ಮತ್ತವರ ತಾಯಿ ನಡೆದುಕೊಂಡು ಬರುತ್ತಿದ್ರು. ಅದೇ ಮಾರ್ಗದಲ್ಲಿ ಬಂದ ಕಾಮುಕನೊಬ್ಬ ಬೇಕೆಂತಲೇ ದೀಪಿಕಾಳ ಮೈಸವರಿಕೊಂಡು ಹೋಗಿದ್ದ. ಏನೂ ನಡೆದೇ ಇಲ್ಲ ಎಂಬಂತೆ ಅವನ ಹಿಂದೆಯೇ ಹೋದ ದೀಪಿಕಾ ನಡು ರಸ್ತೆಯಲ್ಲೇ ಅಡ್ಡ ಹಾಕಿ ಅವನ ಕಪಾಳಕ್ಕೆ ಬಾರಿಸಿದ್ರು. ನಂತರ ಅಲ್ಲಿಂದ ನಡೆದುಕೊಂಡು ಹೋದ್ರು. ಈ ಘಟನೆ ಬಳಿಕ ನನ್ನನ್ನು ನಾನು ಕಾಪಾಡಿಕೊಳ್ಳಬಲ್ಲೆ ಎಂಬ ಭರವಸೆ ಹೆತ್ತವರಲ್ಲಿ ಮೂಡಿತ್ತು ಅಂತಾ ದೀಪಿಕಾ ಹೇಳಿದ್ದಾರೆ.
Comments