'ಬಿಗ್ ಬಾಸ್' ನಿವೇದಿತಾ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡ್ತಾರಾ..!!

'ಬಿಗ್ ಬಾಸ್'ಗಾಗಿ ಕಾಲೇಜ್ ಬಿಟ್ಟಿದ್ದ ನಿವೇದಿತಾ ಮತ್ತೆ ಕಾಲೇಜಿನತ್ತ ಮುಖಮಾಡಿದ್ದಾರೆ. 'ಬಿಗ್ ಬಾಸ್' ಮನೆಯಲ್ಲಿ ನಿವೇದಿತಾ ತಮ್ಮ ವಿಭಿನ್ನ ಮಾತು, ನಡವಳಿಕೆಯಿಂದಾಗಿ ಅಪಾರ ವೀಕ್ಷಕರನ್ನು ಸೆಳೆದಿದ್ದರು. ಮನೆಯಲ್ಲಿದ್ದ ಸ್ಪರ್ಧಿಗಳಲ್ಲಿ ಕಿರಿಯ ವಯಸ್ಸಿನವರಾದ ನಿವೇದಿತಾ ಸೆಲೆಬ್ರಿಟಿಗಳಿಗೂ ಕಡಿಮೆ ಇಲ್ಲದಂತೆ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ.
'ಬಿಗ್ ಬಾಸ್' ಸೀಸನ್ 5 ರಲ್ಲಿ ತನ್ನದೇ ಆದ ಶೈಲಿಯಿಂದಾಗಿ ಗಮನ ಸೆಳೆದಿದ್ದ ಡಬ್ ಸ್ಮ್ಯಾಶ್ ಸ್ಟಾರ್ ನಿವೇದಿತಾ ಗೌಡ ಫಿನಾಲೆವರೆಗೂ ಬಂದಿದ್ದರು.'ಬಿಗ್ ಬಾಸ್'ನಿಂದ ಹೊರಬಂದ ಬಳಿಕ ಅವರ ಮದುವೆ ಬಗ್ಗೆಯೂ ಮಾತುಗಳು ಕೇಳಿ ಬಂದಿವೆ. ಇನ್ನೂ ಓದಬೇಕಿರುವುದರಿಂದ ಸದ್ಯಕ್ಕೆ ಮದುವೆಯಂತೂ ಇಲ್ಲ. ತಮ್ಮ ಪೋಷಕರು ನೋಡಿದ ಹುಡುಗನನ್ನೇ ಮದುವೆಯಾಗುವುದಾಗಿ ಅವರು ಹೇಳಿದ್ದಾರೆ. ಇನ್ನು ನಿವೇದಿತಾ ಅವರಿಗೆ ಸ್ಯಾಂಡಲ್ ವುಡ್ ನಿಂದ ಹೆಚ್ಚಿನ ಆಫರ್ ಗಳು ಬರ್ತಿವೆ. ನಿವೇದಿತಾ ಅವರಿಗೆ ಸಿನಿಮಾದಲ್ಲಿ ನಟಿಸುವಂತೆ ಅನೇಕರು ಆಫರ್ ನೀಡಿದ್ದಾರೆ ಎನ್ನಲಾಗಿದ್ದು, ನಿವೇದಿತಾ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
Comments