ವಿದೇಶಗಳಲ್ಲೂ ಭರ್ಜರಿ ಕಲೆಕ್ಷನ್ ಬಾಚಿಕೊಂಡ 'ಪದ್ಮಾವತ್'..!

ವಿರೋಧದ ನಡುವೆಯೂ ರಿಲೀಸ್ ಆಗಿದ್ದ ಪದ್ಮಾವತ್ ಸಿನೆಮಾ ಮೊದಲ ವಾರಾಂತ್ಯದಲ್ಲೇ 100 ಕೋಟಿ ರೂಪಾಯಿ ಬಾಚಿಕೊಂಡಿತ್ತು. ಸದ್ಯ ಭಾರತದಲ್ಲಿ ಪದ್ಮಾವತ್ ಚಿತ್ರದ ಕಲೆಕ್ಷನ್ 150 ಕೋಟಿ ದಾಟಿದೆ. ಅಮೆರಿಕ ಸೇರಿದಂತೆ ವಿವಿಧ ದೇಶಗಳಲ್ಲಿ ಕೂಡ ಪದ್ಮಾವತ್ ಚಿತ್ರ ನೋಡಲು ಪ್ರೇಕ್ಷಕರು ಥಿಯೇಟರ್ ಗೆ ಹರಿದು ಬರ್ತಿದ್ದಾರೆ. ಹಾಗಾಗಿ ವಿದೇಶಗಳಲ್ಲಿ ಚಿತ್ರದ ಕಲೆಕ್ಷನ್ ಈಗಾಗ್ಲೇ 50 ಕೋಟಿ ರೂಪಾಯಿಗೂ ಅಧಿಕವಾಗಿದೆ.
ಈವರೆಗೆ ವಿದೇಶಗಳಲ್ಲಿ ಪದ್ಮಾವತ್ ಚಿತ್ರದ ಬಾಕ್ಸ್ ಆಫೀಸ್ ಕಲೆಕ್ಷನ್ 76.24 ಕೋಟಿ ರೂಪಾಯಿ ಅಂತಾ ಹೇಳಲಾಗ್ತಿದೆ. ಹಾಗಾಗಿ ಒಟ್ಟಾರೆಯಾಗಿ ಚಿತ್ರ 200 ಕೋಟಿಯ ಗಡಿ ದಾಟಿದಂತಾಗಿದೆ. ಮುಂದಿನ ದಿನಗಳಲ್ಲಿ ಪದ್ಮಾವತ್ ಬಾಲಿವುಡ್ ನ ಅತ್ಯಂತ ಜನಪ್ರಿಯ ಚಿತ್ರ ಎನಿಸಿಕೊಳ್ಳಬಹದು ಅನ್ನೋ ನಿರೀಕ್ಷೆ ಕೂಡ ಇದೆ.
Comments