ದರ್ಶನ್, ಧ್ರುವ ಸರ್ಜಾ ಫ್ಯಾನ್ಸ್ ಗೆ ಗುಡ್ ನ್ಯೂಸ್
ಪ್ರೇಮಬರಹ ಸಿನಿಮಾದಲ್ಲಿ ಸಾಕಷ್ಟು ವಿಶೇಷತೆಗಳಿದ್ದು, ಚಿತ್ರದ ಹಾಡೊಂದರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್, ಧ್ರುವ ಸರ್ಜಾ, ಚಿರಂಜೀವಿ ಸರ್ಜಾ, ಅರ್ಜುನ್ ಸರ್ಜಾ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಬಿಗ್ ಬಾಸ್ ಚಂದನ್ ಕುಮಾರ್ ನಾಯಕನಾಗಿ ನಟಿಸಿದ್ದು, ಚಿತ್ರಕ್ಕೆ ಜೆಸ್ಸ್ಟಿ ಗಿಫ್ಟ್ ಸಂಗೀತ ನೀಡಿದ್ದಾರೆ.
ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ನಿರ್ಮಾಣ, ನಿರ್ದೇಶನದಲ್ಲಿ ಮೂಡಿಬಂದಿರುವ 'ಪ್ರೇಮ ಬರಹ' ಚಿತ್ರ ಫೆಬ್ರವರಿ 9 ರಂದು ತೆರೆಗೆ ಬರ್ತಿದೆ. ಚಿತ್ರದಲ್ಲಿ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ, 'ಬಿಗ್ ಬಾಸ್' ಖ್ಯಾತಿಯ ಚಂದನ್ ಮೊದಲಾದವರು ಅಭಿನಯಿಸಿದ್ದು, ಚಿತ್ರದ ವಿಶೇಷ ಸಾಂಗ್ ಅನ್ನು ಫೆಬ್ರವರಿ 1 ರಂದು ಬಿಡುಗಡೆ ಮಾಡಲಾಗ್ತಿದೆ. ಈ ವಿಶೇಷ ಸಾಂಗ್ ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್, ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕಾಣಿಸಿಕೊಂಡಿದ್ದಾರೆ. ಆಂಜನೇಯನ ಕುರಿತಾದ ಸಾಂಗ್ ಇದಾಗಿದ್ದು, ಅರ್ಜುನ್ ಸರ್ಜಾ, ದರ್ಶನ್, ಚಿರಂಜೀವಿ ಸರ್ಜಾ, ಧ್ರುವ ಸರ್ಜಾ ಹೆಜ್ಜೆ ಹಾಕಿದ್ದಾರೆ. ದೊಡ್ಡ ಆಂಜನೇಯನ ಮೂರ್ತಿಯ ಎದುರು ಸರ್ಜಾ ಫ್ಯಾಮಿಲಿಯೊಂದಿಗೆ ದರ್ಶನ್ ಕೇಸರಿ ಡ್ರೆಸ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಅರ್ಜುನ್ ಸರ್ಜಾ ಅಭಿನಯದ 'ಪ್ರತಾಪ್' ಚಿತ್ರದ 'ಪ್ರೇಮ ಬರಹ.' ಹಾಡು ಮೋಡಿ ಮಾಡಿತ್ತು. 'ಪ್ರೇಮ ಬರಹ' ವಿಭಿನ್ನ ಕಥಾಹಂದರ ಹೊಂದಿದ್ದು, ಆರಂಭದಿಂದಲೂ ಭಾರೀ ಕುತೂಹಲ ಮೂಡಿಸಿದೆ. ದರ್ಶನ್ ಅಭಿನಯದ 50 ನೇ ಚಿತ್ರ 'ಕುರುಕ್ಷೇತ್ರ'ದಲ್ಲಿ ಅರ್ಜುನ್ ಸರ್ಜಾ ಅವರೂ ಅಭಿನಯಿಸಿದ್ದಾರೆ. ಅರ್ಜುನ್ ಸರ್ಜಾ ನಿರ್ದೇಶನದ 'ಪ್ರೇಮ ಬರಹ'ದಲ್ಲಿ ದರ್ಶನ್ ಕಾಣಿಸಿಕೊಂಡಿರುವುದು ವಿಶೇಷವಾಗಿದೆ.
Comments