ಕುಮಾರ್ ಬಂಗಾರಪ್ಪಗೆ ಟ್ಯಾಂಕ್ಸ್ ಹೇಳಿದ ಅಭಿನಯ ಚಕ್ರವರ್ತಿ

'ಬಿಗ್ ಬಾಸ್'ನ ನಿಮ್ಮ ಪ್ರಯಾಣದ ವಿಟಿಯನ್ನು ನೋಡಿದೆ. ಸುಂದರವಾಗಿದೆ. ಕನ್ನಡ ಸಿನಿಮಾ ಇಂಡಸ್ಟ್ರಿ ಕಂಡ ಆಕರ್ಷಕ ನಟರಲ್ಲಿ ನೀವೊಬ್ಬರಾಗಿದ್ದೀರಿ. ದೇವರು ನಿಮಗೆ ಎಲ್ಲಾ ಯಶಸ್ಸು ನೀಡಲಿ. ನಿಮ್ಮ ವರ್ಣರಂಜಿತ ಪ್ರಯಾಣ ಯಶಸ್ಸಿನಲ್ಲಿ ಸಾಗಲಿ ಎಂದು ಹಾರೈಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸುದೀಪ್, ಧನ್ಯವಾದ ಸಾರ್ ಹೇಳಿದ್ದಾರೆ.
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕಿರುತೆರೆಯಲ್ಲಿಯೂ ಮಿಂಚುತ್ತಿರುವುದು ಎಲ್ಲರಿಗೂ ತಿಳಿದ ವಿಚಾರವೇ. 'ಬಿಗ್ ಬಾಸ್' 5 ಸೀಸನ್ ಗಳಲ್ಲಿ ತಮ್ಮದೇ ಶೈಲಿಯ ನಿರೂಪಣೆ, ಸ್ಟೈಲಿಶ್ ಲುಕ್ ನಿಂದ ಸುದೀಪ್ ಅಭಿಮಾನಿಗಳಿಗೆ ಹತ್ತಿರವಾಗಿದ್ದಾರೆ.ಇತ್ತೀಚೆಗಷ್ಟೇ 'ಬಿಗ್ ಬಾಸ್' ಸೀಸನ್ 5 ಮುಕ್ತಾಯವಾಗಿದೆ. ಫಿನಾಲೆಯಲ್ಲಿ 'ಬಿಗ್ ಬಾಸ್' ವೇದಿಕೆಯಲ್ಲಿ ಸುದೀಪ್ ಅವರ 'ಬಿಗ್ ಬಾಸ್' ಜರ್ನಿಯ ವಿಟಿ ತೋರಿಸಲಾಗಿದೆ. ಇದನ್ನು ಮಾಜಿ ಸಚಿವ ಕುಮಾರ್ ಬಂಗಾರಪ್ಪ ಅವರೂ ವೀಕ್ಷಿಸಿದ್ದು, ಸುದೀಪ್ ಅವರನ್ನು ಕೊಂಡಾಡಿದ್ದಾರೆ.
Comments