ರ‍್ಯಾಪ್ ಸಿಂಗರ್ ಚಂದನ್ ಶೆಟ್ಟಿಯ ಆಸೆ ನೆರವೇರಿಸಿ ಕೊಟ್ಟ ಕಿಚ್ಚ

ನಾನು ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ನನ್ನ `ಟಕಿಲ’ ಹಾಡು ಬಿಡುಗಡೆಯಾಗಿತ್ತು. ಇದ್ದಕ್ಕೆ ನಾನು ಸುದೀಪ್ ಸರ್‍ಗೆ ಧನ್ಯವಾದ ಹೇಳಲು ಇಚ್ಛಿಸುತ್ತೇನೆ. ದೊಡ್ಡ ದೊಡ್ಡ ಸಿನಿಮಾಗಳು ಬಿಗ್ ಬಾಸ್ ವೇದಿಕೆಯಲ್ಲಿ ಪ್ರಮೋಟ್ ಮಾಡೋದು ದೊಡ್ಡ ವಿಚಾರ. ನಾನು ಬಿಗ್ ಬಾಸ್ ಮನೆಗೆ ಹೋಗುವಾಗ ಸುದೀಪ್ ಅವರ ಮುಂದೆ ನನ್ನ ಕೋರಿಕೆ ಹೇಳಿಕೊಂಡಿದೆ. ನನ್ನ `ಟಕಿಲ’ ಹಾಡನ್ನು ರಿಲೀಸ್ ಮಾಡಿಕೊಡಿ ಎಂದು ಕೇಳಿಕೊಂಡಿದ್ದೆ ಎಂದು ಚಂದನ್ ಶೆಟ್ಟಿ ಹೇಳಿದ್ದರು.
ನನ್ನ `ಟಕಿಲ’ ಹಾಡನ್ನು ರಿಲೀಸ್ ಮಾಡಿಕೊಡಿ ಎಂದಾಗ ಅವರು ಸರಿ ಎಂದು ನನಗೆ ಪ್ರಾಮಿಸ್ ಕೂಡ ಮಾಡಿದ್ದರು. ಬಳಿಕ ಅವರು ನನ್ನ ಹತ್ತಿರ ಹೇಳಿದಂತೆ ಅವರ ಮಾತನ್ನು ಉಳಿಸಿಕೊಂಡಿದ್ದಾರೆ. ಸುದೀಪ್ ಸರ್ ಕರ್ನಾಟಕದ ಕಿರೀಟದ ವಜ್ರ. ಬಿಗ್ ಬಾಸ್ ವೇದಿಕೆಯಲ್ಲಿ `ಟಕಿಲ’ ಹಾಡು ಬಿಡುಗಡೆ ಆಗಿದ್ದಕ್ಕೆ ಅದು ಸಾಕಷ್ಟು ಜನಪ್ರಿಯವಾಯಿತ್ತು. 1 ದಿನದಲ್ಲಿ 12 ಲಕ್ಷಕ್ಕೂ ಹೆಚ್ಚು ವ್ಯೂ ಕಂಡಿತ್ತು. ಇದರಿಂದ ಬಿಗ್ ಬಾಸ್ ಎಷ್ಟು ಜನಪ್ರಿಯ ಕಾರ್ಯಕ್ರಮ ಎಂದು ತಿಳಿಯುತ್ತದೆ. `ಟಕಿಲ’ ಹಾಡು ಬಿಗ್ ಬಾಸ್ ವೇದಿಕೆಯಲ್ಲಿ ಬಿಡುಗಡೆ ಮಾಡಿದ್ದಕ್ಕೆ ನನಗೆ ತುಂಬಾನೇ ಗೌರವ ಇದೆ ಎಂದು ಚಂದನ್ ಶೆಟ್ಟಿ ತಿಳಿಸಿದ್ದಾರೆ.
Comments