ಕನಕ ಚಿತ್ರ ಕಣ್ತುಂಬಿ ಕೊಳ್ಳಲಿರುವ ಡಾ.ರಾಜ್ ಕುಟುಂಬ !
ಹೌದು, ಕನಕ ಚಿತ್ರದಲ್ಲಿ ದುನಿಯಾ ವಿಜಯ್ ಅವರು ಅಪ್ಪಟ ಡಾ. ರಾಜ್ ಅಭಿಮಾನಿಯಾಗಿ ಮಿಂಚಿದ್ದಾರೆ. ಇದು ರಾಜ್ ಅಭಿಮಾನಿಗಳನ್ನು ತನ್ನತ್ತ ಸೆಳೆಯುತ್ತಿದೆ. ಇದನ್ನು ತಿಳಿದ ರಾಘವೇಂದ್ರ ರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಕುಟುಂಬ ಸಮೇತ ಈ ಚಿತ್ರವನ್ನು ನೋಡಲು ಬಯಸಿದ್ದಾರೆ.
ಜ. 26 ರಂದು ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಆರ್. ಚಂದ್ರು ನಿರ್ದೇಶನದ ದುನಿಯಾ ವಿಜಯ್ ನಟನೆಯ ಕನಕ ಸಿನಿಮಾವನ್ನು ಡಾ.ರಾಜ್ ಕುಮಾರ್ ಕುಟುಂಬ ವೀಕ್ಷಿಸಲಿದೆ ಎಂದು ಆರ್. ಚಂದ್ರ ತಿಳಿಸಿದ್ದಾರೆ. ಇನ್ನು ಮಾಸ್ ಹೀರೋ ಆಗಿರುವ ದುನಿಯಾ ವಿಜಯ್ ಅವರು ಈ ಚಿತ್ರದ ಮೂಲಕ ತಮ್ಮ ಇಮೇಜ್ ಅನ್ನು ಬದಲಾಯಿಸಿಕೊಂಡಿರುವುದು ಹಲವರನ್ನು ಚಕಿತರನ್ನಾಗಿ ಮಾಡಿದೆ.
Comments