ನಟಿ ಹರಿಪ್ರಿಯಾ ಕಾಸ್ಟಿಂಗ್ ಕೌಚ್ ಬಗ್ಗೆ ಹೇಳಿದ್ದೇನು ?
ಕೆಲ ದಿವಸಗಳ ಹಿಂದೆ ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಬಗ್ಗೆ ಶ್ರುತಿ ಹರಿಹರನ್ ಸ್ಫೋಟಕ ಮಾಹಿತಿಯನ್ನು ಬಹಿರಂಗ ಪಡಿಸಿ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದರು. ಅವರ ಆ ಶಾಕಿಂಗ್ ಹೇಳಿಕೆ ನೀಡಿದ ನಂತರ ಸ್ಯಾಂಡಲ್ ವುಡ್ ಸೇರಿದಂತೆ ಅನೇಕ ಕಡೆ ಈ ವಿಷಯ ಸಾಕಷ್ಟು ಚರ್ಚೆ ನಡೆಸಿದ್ದಾರೆ ಕೂಡ. ಈ ನಡುವೆ ಕೆಲವರು ಶ್ರುತಿ ಅವರ ಕಾಸ್ಟಿಂಗ್ ಕೌಚ್ ನಡೆಯನ್ನು ಖಂಡಿಸಿದರೆ, ಇನ್ನು ಕೆಲವರು ಅವರನ್ನು ಬೆಂಬಲಿಸಿದ್ದಾರೆ. ಸದ್ಯ ನಟಿ ಹರಿಪ್ರಿಯಾ ಅವರು ಕಾಸ್ಟಿಂಗ್ ಕೌಚ್ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅವರು ಧರ್ಮಗಿರಿ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ `ಬೆಲ್ ಬಾಟಮ್' ಚಿತ್ರದ ಮುಹೂರ್ತ ನಡೆಯಿತು. ನಂತರ ಮಾತನಾಡಿದ ಅವರು, `ನಾನು ಯಾರ ಪರ ಅಥವಾ ವಿರೋಧ ಮಾತಾಡುತ್ತಿಲ್ಲ. ಆದರೆ, ನನಗೆ ಯಾವತ್ತೂ ಆ ವಿಷಯದ ಬಗ್ಗೆ ನನಗೆ ಸಮಸ್ಯೆ ಆಗಿಲ್ಲ. ಅದಲ್ಲದೇ ಆ ಬಗ್ಗೆ ನನಗೆ ಇದುವರೆಗೂ ಯಾರೂ ನನ್ನನ್ನು ಕೆಟ್ಟದಾಗಿ ನಡೆಸಿಕೊಂಡಿಲ್ಲ ಮತ್ತು ನನಗೆ ಯಾವುದೇ ಸಮಸ್ಯೆ ಆಗಿಲ್ಲ' ಇದಲ್ಲದೇ ಇನ್ನು ಈ ತರಹದ ಪ್ರಕರಣಗಳಲ್ಲಿ ಸಂಪೂರ್ಣವಾಗಿ ಪುರುಷರದೇ ತಪ್ಪು ಎಂದು ಹೇಳುವುದು ಸರಿಯಲ್ಲ. ನಾವು ಹೇಗಿರುತ್ತೀವೋ ಅದು ಬಹಳ ಮುಖ್ಯ ಅಂತ ಹೇಳಿದ್ದಾರೆ.
Comments