ಸ್ಯಾಂಡಲ್‌ವುಡ್ ನ 'ಕಿರಿಕ್ ಪಾರ್ಟಿ' ಬೆಡಗಿಗೆ ಫಿದಾ ಆದ್ರು ಟಾಲಿವುಡ್ ಮೆಗಾಸ್ಟಾರ್

ನಟಿ ರಶ್ಮಿಕಾ ಮಂದಣ್ಣ ಈಗ ಕನ್ನಡದಲ್ಲಿ ಮಾತ್ರವಲ್ಲದೆ ತೆಲುಗಿನಲ್ಲಿ ತನ್ನ ಮೋಡಿ ಶುರು ಮಾಡಿದ್ದಾರೆ. 'ಕಿರಿಕ್ ಪಾರ್ಟಿ' ಸಿನಿಮಾದ ಮೂಲಕ ಕನ್ನಡದಲ್ಲಿ ಸಿನಿ ಜರ್ನಿ ಪ್ರಾರಂಭ ಮಾಡಿದ್ದ ರಶ್ಮಿಕಾ ನಂತರ ಸ್ಟಾರ್ ನಟರ ಜೊತೆಗೆ ಸಿನಿಮಾ ಮಾಡಿ ದೊಡ್ಡ ಜನಪ್ರಿಯತೆ ಗಳಿಸಿದರು. ಈಗ ಟಾಲಿವುಡ್ ನಲ್ಲಿಯೂ ಅವರ ಜನಪ್ರಿಯತೆ ಮುಂದುವರೆದಿದೆ.
'ಚಲೋ' ಸಿನಿಮಾ ಮೂಲಕ ರಶ್ಮಿಕಾ ಮಂದಣ್ಣ ತೆಲುಗು ಸಿನಿಮಾ ಪ್ರೇಮಿಗಳಿಗೆ ಪರಿಚಯ ಆಗಿದ್ದಾರೆ. ಅಂದಹಾಗೆ, ಈ ಸಿನಿಮಾದ ಆಡಿಯೋ ರಿಲೀಸ್ ಕಾರ್ಯಕ್ರಮ ಇತ್ತೀಚಿಗಷ್ಟೆ ನಡೆದಿದೆ. ಈ ಕಾರ್ಯಕ್ರಮಕ್ಕೆ ನಟ ಮೆಗಾಸ್ಟಾರ್ ಚಿರಂಜೀವಿ ಅತಿಥಿಯಾಗಿ ಬಂದಿದ್ದು, ಸಿನಿಮಾಗೆ ಶುಭ ಕೋರಿದ್ದಾರೆ.ಜೊತೆಗೆ ನಟಿ ರಶ್ಮಿಕಾ ಬಗ್ಗೆ ಚಿರು ವೇದಿಕೆ ಮೇಲೆ ಮಾತನಾಡಿದ್ದು, ''ರಶ್ಮಿಕಾ ಮಂದಣ್ಣ ಅವರಿಂದ ಈ ಸಿನಿಮಾಗೆ ಗ್ಲಾಮರ್ ಬಂದಿದೆ. ಅವರು ತುಂಬ ಮುದ್ದಾಗಿದ್ದಾರೆ. ಟಾಲಿವುಡ್ ಚಿತ್ರರಂಗಕ್ಕೆ ಅವರನ್ನು ಸ್ವಾಗತಿಸುತಿಸುತಿದ್ದೇನೆ. ಆಲ್ ದಿ ಬೆಸ್ಟ್'' ಎಂದು ಹೇಳಿದ್ದಾರೆ.'ಚಲೋ' ನಾಗಶೌರ್ಯ ಮತ್ತು ರಶ್ಮಿಕಾ ಮಂದಣ್ಣ ಕಾಂಬಿನೇಶನ್ ನಲ್ಲಿ ಬರುತ್ತಿರುವ ಸಿನಿಮಾ ಆಗಿದೆ. ಈ ಚಿತ್ರದ ಹಾಡುಗಳು ಈಗಾಗಲೇ ದೊಡ್ಡ ಸದ್ದು ಮಾಡಿದ್ದು, ಸಿನಿಮಾ ಇದೇ ಶುಕ್ರವಾರ ಬಿಡುಗಡೆಯಾಗುತ್ತಿದೆ.
Comments