'ಬಿಗ್ ಬಾಸ್' ವಿನ್ನರ್ ಚಂದನ್ ಶೆಟ್ಟಿ ಬಹುಮಾನದ ಹಣವನ್ನು ಏನ್ ಮಾಡಿದ್ರು ಗೊತ್ತಾ..?

'ಬಿಗ್ ಬಾಸ್' ವಿನ್ನರ್ ಆಗಿ ತಮಗೆ ಬಂದ ಬಹುಮಾನದ ಮೊತ್ತವನ್ನು ಚಂದನ್ ತಮ್ಮ ತಂದೆಗೆ ಕೊಟ್ಟಿದ್ದಾರೆ. ಚಂದನ್ ಪೋಷಕರು ಕಾರಣಾಂತರದಿಂದ ಇದ್ದ ಮನೆಯನ್ನು ಮಾರಿದ್ದು ಬಾಡಿಗೆ ಮನೆಯಲ್ಲಿದ್ದಾರೆ. ಸ್ವಂತ ಮನೆಯನ್ನು ಹೊಂದಬೇಕೆಂಬುದು ಚಂದನ್ ಕುಟುಂಬದವರ ಆಸೆಯಾಗಿದೆ. ತಮ್ಮ ತಂದೆಯ ಆಸೆಯನ್ನು ಈಡೇರಿಸಲು ಚಂದನ್ ಬಹುಮಾನದ ಮೊತ್ತವನ್ನು ಅವರಿಗೆ ಕೊಟ್ಟಿದ್ದಾರೆ. ಈ ಮೂಲಕ ತಂದೆ, ತಾಯಿಯ ಆಸೆಯಂತೆ ಮನೆ ಹೊಂದಲು ಹಣವನ್ನು ಬಳಸಿಕೊಳ್ಳಲಿದ್ದಾರೆ.
ಕನ್ನಡ ರ್ಯಾಪರ್ ಚಂದನ್ ಶೆಟ್ಟಿ ಅವರು 'ಬಿಗ್ ಬಾಸ್' ಸೀಸನ್ 5 ವಿನ್ನರ್ ಆಗಿದ್ದಾರೆ. 'ಬಿಗ್ ಬಾಸ್' ಮನೆಯೊಳಗೆ 106 ದಿನಗಳ ಕಾಲ ತಮ್ಮದೇ ಆದ ಶೈಲಿಯ ಆಟ, ಹಾಡುಗಳಿಂದ ವೀಕ್ಷಕರ ಮನ ಸೆಳೆದ ಅವರು ವಿನ್ನರ್ ಆಗಿದ್ದು, ಅಲ್ಲಿಂದ ಹೊರ ಬಂದ ಅವರಿಗೆ ಅದ್ಧೂರಿ ಸ್ವಾಗತ ಸಿಕ್ಕಿದೆ. ಚಂದನ್ ಭರ್ಜರಿ ಸಂಭ್ರಮದಲ್ಲಿದ್ದಾರೆ.
Comments