ಶಾಹಿದ್ ಜೊತೆ ಮಾಜಿ ಪ್ರೇಯಸಿ ಕರೀನಾ ಕಪೂರ್ ರೋಮ್ಯಾನ್ಸ್
ಶಾಹಿದ್ ಜೊತೆ ಮಾಜಿ ಪ್ರೇಯಸಿ ಕರೀನಾ ಕಪೂರ್ ನಟಿಸ್ತಾಳೆ ಎಂಬ ಸುದ್ದಿ ಹರಿದಾಡ್ತಿದೆ. 10 ವರ್ಷಗಳ ನಂತ್ರ ಸೂಪರ್ ಜೋಡಿಯನ್ನು ತೆರೆ ಮೇಲೆ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ಆದ್ರೆ ಈ ಬಗ್ಗೆ ಇಮ್ತಿಯಾಝ್ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.
ಸದ್ಯ ಬಾಲಿವುಡ್ ನಟ ಶಾಹಿದ್ ಕಪೂರ್ ಬ್ಯುಸಿ. 'ಪದ್ಮಾವತ್' ನಂತ್ರ ಶಾಹಿದ್ ಗೆ ಮತ್ತಷ್ಟು ಆಫರ್ ಬರ್ತಿದೆ. ಪದ್ಮಾವತ್ ನಲ್ಲಿ ಶಾಹಿದ್ ನಟನೆಗೆ ಮೆಚ್ಚುಗೆ ವ್ಯಕ್ತವಾಗಿದ್ದು, ಮೂರೇ ದಿನದಲ್ಲಿ ಚಿತ್ರ 106 ಕೋಟಿ ಗಳಿಸಿದೆ. 'ಪದ್ಮಾವತ್' ನಂತ್ರ ಶಾಹಿದ್ 'ಗುಲ್ ಮೀಟರ್ ಚಾಲೂ' ಚಿತ್ರದಲ್ಲಿ ನಟಿಸ್ತಿದ್ದಾರೆ. ಈ ಚಿತ್ರದ ಚಿತ್ರೀಕರಣ ಸದ್ಯದಲ್ಲಿಯೇ ಶುರುವಾಗಲಿದೆ.ಇದ್ರ ಜೊತೆಗೆ ಶಾಹಿದ್ ಇಮ್ತಿಯಾಝ್ ಅಲಿ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿಯಿದೆ. ಶಾಹಿದ್ ಹಾಗೂ ಇಮ್ತಿಯಾಜ್ 10 ವರ್ಷಗಳ ಹಿಂದೆ ಮ್ಯಾಜಿಕ್ ಮಾಡಿದ್ದರು. 2007ರಲ್ಲಿ ತೆರೆಗೆ ಬಂದ 'ಜಬ್ ವಿ ಮೆಟ್' ಬಾಲಿವುಡ್ ನಲ್ಲಿ ಕಮಾಲ್ ಮಾಡಿತ್ತು. 'ಜಬ್ ವಿ ಮೆಟ್' ಸಿಕ್ವೆಲ್ ಮಾಡಲು ಇಮ್ತಿಯಾಝ್ ಮುಂದಾಗಿದ್ದಾರೆ. ಮುಂದಿನ ವರ್ಷ ಚಿತ್ರದ ಶೂಟಿಂಗ್ ನಡೆಯಲಿದೆ. ಈ ಚಿತ್ರಕ್ಕಾಗಿ ಹಿರೋಯಿನ್ ಹುಡುಕಾಟ ನಡೆಯುತ್ತಿದೆ. ಆದ್ರೆ 'ಜಬ್ ವಿ ಮೆಟ್' ಚಿತ್ರದಲ್ಲಿ ನಟಿಸಿದ್ದ ಜೋಡಿಯೇ ಸಿಕ್ವೆಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿಯಿದೆ.
Comments