ಕನಕ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು ಮೊದಲ ದಿನವೇ ಊಹೆಗೂ ಮೀರಿದ ಕಲೆಕ್ಷನ್ ..!!

27 Jan 2018 4:34 PM | Entertainment
466 Report

ಗಣರಾಜ್ಯೋತ್ಸವದ ರಜೆಯಲ್ಲಿ ಕನಕ ಚಿತ್ರ ರಿಲೀಸ್ ಆಗಿದ್ದು , ಚಿತ್ರತಂಡಕ್ಕೆ ಭರ್ಜರಿ ಓಪನಿಂಗ್ ಸಿಕ್ಕಿದೆ. ಸುಮಾರು 335 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಕನಕ ಚಿತ್ರ ಬಿಡುಗಡೆಯಾಗಿದೆ. ಕನಕ ಚಿತ್ರದ ಮೊದಲ ದಿನದ ಕಲೆಕ್ಷನ್ ಗಾಂಧಿನಗರದ ಮೂಲದ ಪ್ರಕಾರ 4 ಕೋಟಿ ರೂ. ದಾಟಿದೆ ಎನ್ನಲಾಗುತ್ತಿದೆ.

 ರಾಜ್ಯಾದ್ಯಂತ ಶುಕ್ರವಾರ ತೆರೆಕಂಡಿರುವ ಬಹುನಿರೀಕ್ಷಿತ ಕನಕ ಚಿತ್ರಕ್ಕೆ ಭರ್ಜರಿ ಪ್ರತಿಕ್ರಿಯೆ ದೊರೆತಿದ್ದು, ತೆರೆಕಂಡ ಎಲ್ಲಾ ಚಿತ್ರಮಂದಿರಗಳಲ್ಲಿಯೂ ಹೌಸ್ ಫುಲ್ ಪ್ರದರ್ಶನ ಕಂಡಿದೆ. ಇನ್ನು ಈ ಚಿತ್ರದಲ್ಲಿ ದುನಿಯಾ ವಿಜಯ್ ಅವರು ಆಟೋ ಡ್ರೈವರ್ ಆಗಿ ಕಾಣಿಸಿಕೊಂಡಿದ್ದಾರೆ. ಆರ್. ಚಂದ್ರು ನಿರ್ದೇಶ,ನವೀನ್ ಸಜ್ಜು ಸಂಗೀತ ನಿರ್ದೇಶನ ಪ್ರೇಕ್ಷಕರಿಗೆ ಮೋಡಿ ಮಾಡಿದೆ.

Edited By

Suhas Test

Reported By

Madhu shree

Comments