ಪ್ರಾಣಾಪಾಯದಿಂದ ಪಾರಾದ ತೆಲುಗು ಚಿತ್ರರಂಗದ ಖ್ಯಾತ ನಟ ನಾನಿ

ಚಾಲಕನ ನಿಯಂತ್ರಣ ತಪ್ಪಿದ್ದು ಕಾರ್ ವಿದ್ಯುತ್ ಕಂಬಕ್ಕೆ ಡಿಕ್ಕ ಹೊಡೆದಿದೆ. ಈ ಸಂದರ್ಭ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ನಟನಿಗೆ ಯಾವ ಪ್ರಾಣಾಪಾಯವಾಗಿಲ್ಲ. ಘಟನೆಯಲ್ಲಿ ನಾನಿ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರ್ ನಲ್ಲಿ ಏರ್ ಬ್ಯಾಗ್‍ಗಳನ್ನು ಅಳವಡಿಸಿದ್ದ ಕಾರಣ ಚಾಲಕ ಹಾಗೂ ನಟ ಇಬ್ಬರೂ ದೊಡ್ಡ ಅಪಾಯದಿಂದ ಪಾರಾಗಿದ್ದಾರೆ.
ಅಪಘಾತದ ನಂತರ ಪ್ರತಿಕ್ರಯಿಸಿದ ನಟ ನಾನಿ ನಾನು ಆರಾಮವಾಗಿದ್ದೇನೆ. ಸಣ್ಣ ಪುಟ್ಟ ಗಾಯಗಳಾಗಿದ್ದು ಒಂದು ವಾರದಲ್ಲಿ ಚೇತರಿಸಿಕೊಂಡು ಮತ್ತೆ ಬರುತ್ತೇನೆ. ಎಂದು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ. ನಾನಿ ಮೆರ್ಲಾಪಾಕಾ ಗಾಂಧಿ ನಿರ್ದೇಶನದ `ಕೃಷ್ಣಾರ್ಜುನ ಯುದ್ಧಂ'ಚಿತ್ರದಲ್ಲಿ ಅಭಿನಯಿಸುತ್ತಿದ್ದು ನಿನ್ನೆ ಕೂಡ ಅದೇ ಚಿತ್ರದ ಚಿತ್ರೀಕರಣಕ್ಕೆ ತೆರಳಿದ್ದರೆನ್ನಲಾಗಿದೆ. ಚಿತ್ರದಲ್ಲಿ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಈ ನಟನಿಗೆ ನುಪಮ ಪರಮೇಶ್ವರನ್ ಮತ್ತು ರುಕ್ಷಾರ್ ಮೀರ್ ನಾಯಕಿಯರಾಗಿ ಅಭಿನಯಿಸುತ್ತಿದ್ದಾರೆ. ಇನ್ನು ಅಪಘಾತ ಸಂಬಂಧ ಜುಬಿಲಿ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕಾರ್ ಚಾಲಕನ ವಿರುದ್ಧ ಸೆಕ್ಷನ್ 3 ಕಾಯ್ದೆಯಡಿ ಕೇಸು ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.
Comments