ಚಂದನ್‌ಗೆ ಅದೃಷ್ಟ ತಂದು ಕೊಟ್ಟ ಬಿಗ್‌ಬಾಸ್ ಮನೆ..!!
ಕನ್ನಡ ಬಿಗ್‌ಬಾಸ್ 5 ನೇ ಸೀಸನ್‌ನ ಟಾಪ್ 5 ಲಿಸ್ಟ್‌ನಲ್ಲಿರುವ ಸ್ಪರ್ಧಿ ಚಂದನ್ ತುಂಬ ಲಕ್ಕಿ ಎಂದು ಹೇಳಿದರೆ ತಪ್ಪಾಗಲ್ಲ.
ಹೌದು, ಈ ಹಿಂದೆ ಚಂದನ್ ಅವರ ಟಕಿಲಾ ಸಾಂಗ್ ಬಿಗ್‌ಬಾಸ್ ವೇದಿಕೆಯಲ್ಲಿ ರಿಲೀಸ್ ಮಾಡಲಾಗಿತ್ತು. ಇದೇ ಮೊದಲ ಬಾರಿಗೆ ಇಂತಹ ಅದೃಷ್ಟ ಚಂದನ್ ಅವರಿಗೆ ದೊರೆತಿತ್ತು. ಇದರ ಜತೆಗೆ ಕಿಚ್ಚ ಸುದೀಪ್ ಅವರ ಕೈಯಿಂದ ಸಾಂಗ್ ರಿಲೀಸ್ ಮಾಡಿಸಿದ್ದು ಚಂದನ್ ಅವರಿಗೆ ಡಬ್ಬಲ್ ಧಮಾಕ್ ನೀಡಿತ್ತು.ಬಿಡುಗಡೆಯಾದ ಕೆಲ ಗಂಟೆಗಳಲ್ಲಿಯೇ ಈ ಸಾಂಗ್ ದಾಖಲೆ ಪ್ರಮಾಣದಲ್ಲಿ ವೀಕ್ಷಣೆಯಾಗಿತ್ತು. ಅಷ್ಟೇ ಅಲ್ಲದೆ ಕನ್ನಡದ ಸ್ಟಾರ್ ನಟರ ಸಾಂಗ್‌ಗಳನ್ನ ಹಿಂದಿಕ್ಕಿ, ಕಡಿಮೆ ಅವಧಿಯಲ್ಲಿಯೇ ಅತಿ ಹೆಚ್ಚು ಬಾರಿ ವೀಕ್ಷಣೆಗೊಳಗಾಗಿರುವ ಸಾಂಗ್ ಎನ್ನುವ ಪಟ್ಟವನ್ನು ಪಡೆದುಕೊಂಡಿದೆ. ಇದೀಗ ಈ ಸಾಂಗ್ ಮತ್ತೊಮ್ಮೆ ಬಿಗ್‌ಬಾಸ್ ಮನೆಯಲ್ಲಿ ಕೇಳಿ ಬರಲಿದೆ.
ಪ್ರತಿ ದಿನ ಬಿಗ್‌ಬಾಸ್ ಮನೆಯಲ್ಲಿ ಕೇಳಿ ಬರುವ ವೇಕ್‌ಅಪ್ ಸಾಂಗ್‌ಗೆ ಟಕಿಲಾ ಸಾಂಗ್‌ನ್ನು ಸೂಚಿಸಲಾಗಿದೆ. ಬಾಕಿ ಉಳಿದಿರುವ ಮೂರು ದಿನಗಳಲ್ಲಿ ಒಂದು ದಿನ ಚಂದನ್ ಶೆಟ್ಟಿಯ ಟಿಕಿಲಾ ಸಾಂಗ್ ಕೇಳಿಸಲಾಗುತ್ತದೆ. ಉಳಿದ ಎರಡು ದಿನಗಳಲ್ಲಿ ಸ್ಪರ್ಧಿ ಜೆಕೆ ಅವರು ನಾಯಕ ನಟರಾಗಿ ನಟಿಸಿದ್ದ 'ಜಸ್ಟ್ ಲವ್' ಸಿನಿಮಾದ ಟೈಟಲ್ ಸಾಂಗ್ ಹಾಗೂ 'ಪರಮಾತ್ಮ' ಚಿತ್ರದ ಪರವಶನಾದೇನು ಹಾಡು ಕೇಳಿಸಲಾಗುತ್ತದೆ.ಇನ್ನು ಈ ಮೂರು ಸಾಂಗ್‌ಗಳ ಆಯ್ಕೆಯ ವಿಚಾರವನ್ನು ಬಿಗ್‌ಬಾಸ್ ಸ್ಪರ್ಧಿಗಳಿಗೆ ನೀಡಲಾಗಿತ್ತು. ಎಲ್ಲ ಸ್ಪರ್ಧಿಗಳ ಒಮ್ಮತದಿಂದ ಈ ಮೇಲಿನ ಸಾಂಗ್‌ಗಳನ್ನು ಸೆಲೆಕ್ಟ್ ಮಾಡಿ ಬಿಗ್‌ಬಾಸ್‌ಗೆ ತಿಳಿಸಿದರು.
Comments