ವಿಭಿನ್ನ ಲುಕ್ ನಲ್ಲಿ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ

'ಭರ್ಜರಿ' ಯಶಸ್ಸಿನಲ್ಲಿರುವ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು, ನಂದ ಕಿಶೋರ್ ನಿರ್ದೇಶನದ 'ಪೊಗರು' ಚಿತ್ರಕ್ಕಾಗಿ ಭಾರೀ ಸಿದ್ಧತೆ ನಡೆಸಿದ್ದಾರೆ. ಚಿತ್ರದಲ್ಲಿ ಅವರು ವಿಭಿನ್ನ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ಚಿತ್ರದ ನಾಯಕನ ಬಾಲ್ಯದ ಜೀವನದ ಕತೆಗಾಗಿ ಅವರೇ ಬರೋಬ್ಬರಿ 30 ಕೆ.ಜಿ. ತೂಕವನ್ನು ಇಳಿಸಿಕೊಂಡಿದ್ದಾರೆ. ಸಾಮಾನ್ಯವಾಗಿ ನಟರ ಬಾಲ್ಯದ ಜೀವನದ ಕತೆ ತೋರಿಸುವಾಗ ಬಾಲ ಕಲಾವಿದರನ್ನು ಬಳಸಿಕೊಳ್ಳಲಾಗುತ್ತದೆ.ಹೀಗಿದ್ದರೂ, ಅನೇಕ ಕಲಾವಿದರು ತೂಕ ಜಾಸ್ತಿ, ಕಡಿಮೆ ಮಾಡಿಕೊಳ್ಳುವ ಮೂಲಕ ಸವಾಲಿನ ಪಾತ್ರಗಳನ್ನು ನಿರ್ವಹಿಸುತ್ತಾರೆ. ಅದೇ ರೀತಿ ಧ್ರುವ ಸರ್ಜಾ ಬಾಲ್ಯ ಜೀವನದ ಫ್ಲ್ಯಾಶ್ ಬ್ಯಾಕ್ ನಲ್ಲಿ ಬಾಲಕನಾಗಿ ಕಾಣಿಸಿಕೊಳ್ಳಲು ತೂಕ ಇಳಿಸಿಕೊಂಡಿದ್ದಾರೆ.'ಪೊಗರು' ಚಿತ್ರದ ಕತೆ ವಿಭಿನ್ನವಾಗಿದ್ದು, ಫ್ಲ್ಯಾಶ್ ಬ್ಯಾಕ್ ಕತೆಗೆ ತಕ್ಕಂತೆ ಧ್ರುವ ಸರ್ಜಾ ತಾವೇ ಸಣ್ಣಗಾಗಿ ಪಾತ್ರವನ್ನು ನಿರ್ವಹಿಸಿದ್ದಾರೆ. ಚಿತ್ರದ ಕುರಿತಾಗಿ ಕುತೂಹಲ ಹೆಚ್ಚಾಗಿದೆ.
Comments