'ಬಿಗ್ ಬಾಸ್' : ದಿವಾಕರ್ ಮಾತಿಗೆ ಬಿಕ್ಕಿ ಬಿಕ್ಕಿ ಅತ್ತ ನಿವೇದಿತಾ…!!

'ಮಾಸ್ಟರ್ ಡ್ಯಾನ್ಸರ್' ಶೋ ಆರಂಭವಾಗಲಿರುವ ಹಿನ್ನಲೆಯಲ್ಲಿ ನಿರೂಪಕ ಅಕುಲ್ ಬಾಲಾಜಿ 'ಬಿಗ್ ಬಾಸ್' ಮನೆಯೊಳಗೆ ಅತಿಥಿಯಾಗಿ ಆಗಮಿಸಿದ್ದರು. ಫೆಬ್ರವರಿ 5 ರಿಂದ ಶೋ ಆರಂಭವಾಗಲಿದ್ದು, ಚಂದನ್ ಇದಕ್ಕಾಗಿ ವಿಶೇಷ ಹಾಡು ರಚಿಸಿದ್ದಾರೆ. ಮಾಸ್ಟರ್ ಮತ್ತು ಡ್ಯಾನ್ಸರ್ ನಲ್ಲಿ ಗುರು, ಶಿಷ್ಯರು ಒಟ್ಟಿಗೆ ಡ್ಯಾನ್ಸ್ ಮಾಡಲಿದ್ದಾರೆ.
ಇದರ ವಿಶೇಷವಾಗಿ ಅಕುಲ್ ಅವರು ಮನೆಯೊಳಗಿನ ಸ್ಪರ್ಧಿಗಳಿಗೆ ಡ್ಯಾನ್ಸ್ ಮಾಡಿಸಿದ್ದಾರೆ. ಇಬ್ಬರು ಸದಸ್ಯರು ಡ್ಯಾನ್ಸ್ ಮಾಡಿದ ಸಂದರ್ಭದಲ್ಲಿ ಮೂವರು ಸ್ಪರ್ಧಿಗಳು ತೀರ್ಪುಗಾರರಾಗಿದ್ದರು. ತೀರ್ಪುಗಾರನಾಗಿ ಮತ್ತು ಡ್ಯಾನ್ಸರ್ ಆಗಿ ದಿವಾಕರ್ ಅವರಂತೂ ಮನರಂಜಿಸಿದ್ದಾರೆ. ದಿವಾಕರ್ ಅವರೊಂದಿಗೆ ಶ್ರುತಿ, ಚಂದನ್, ನಿವೇದಿತಾ, ಕಾರ್ತಿಕ್ ಅವರು ನೀಡಿದ ಡ್ಯಾನ್ಸ್ ಪ್ರದರ್ಶನ ಸಖತ್ತಾಗಿತ್ತು.
ಮೊದಲಿಗೆ ಸದಸ್ಯರಿಗೆ ಮನೆಯೊಳಗಿನ ಸುದೀರ್ಘ ಪ್ರಯಾಣದಲ್ಲಿ ತಮ್ಮ ಅನುಭವಗಳನ್ನು ಚಿತ್ರದಲ್ಲಿ ರಚಿಸಲು ತಿಳಿಸಲಾಗಿದ್ದು, ಅದರಲ್ಲಿ ಸದಸ್ಯರು ತಮ್ಮ ಅನುಭವಗಳನ್ನು 'ಬಿಗ್ ಬಾಸ್' ಮನೆಗೆ ಸಮೀಕರಿಸಿ, ತಮ್ಮದೇ ಆದ ಕಲ್ಪನೆಯಲ್ಲಿ ಚಿತ್ರಗಳನ್ನು ರಚಿಸಿದ್ದು ವಿಶೇಷವಾಗಿತ್ತು. ಚಂದನ್ ಮತ್ತು ಕಾರ್ತಿಕ್ ಅವರ ಚಿತ್ರಗಳು ವಿಭಿನ್ನವಾಗಿದ್ದವು. ಚಿತ್ರ ಬರೆಯುವಾಗ ಸರಿಯಾಗಲಿಲ್ಲವೆಂದು ನಿವೇದಿತಾ ಅತ್ತಿದ್ದಕ್ಕೆ ಚಂದನ್, ನೀನು ಪಾಪು ರೀತಿ ಅಳ್ತಿದಿಯಲ್ಲಾ, ಡಿಗ್ರಿ ಮಾಡ್ತಿದಿಯಾ? ಹೀಗೆಲ್ಲಾ ಮಾಡ್ತಾರಾ ಎಂದು ತಿಳಿಹೇಳಿದ್ದಾರೆ.ಮನೆಯನ್ನು ಸದಸ್ಯರು ಇಷ್ಟು ದಿನಗಳ ಕಾಲ ಹೇಗೆಲ್ಲಾ ಗಮನಿಸಿದ್ದಾರೆ ಎಂಬುದನ್ನು ತಿಳಿಯಲು 'ನನ್ನ ಬಿಗ್ ಬಾಸ್ ಮನೆ' ಚಟುವಟಿಕೆ ನೀಡಿದ್ದು, ಬಾಗಿಲು ಎಷ್ಟಿವೆ?, ಕ್ಯಾಮೆರಾ ಎಷ್ಟಿವೆ? ಟಿ.ವಿ. ಎಷ್ಟಿವೆ ಮೊದಲಾದವುಗಳ ಬಗ್ಗೆ 'ಬಿಗ್ ಬಾಸ್' ಪ್ರಶ್ನಿಸಿದ್ದು, ಇದಕ್ಕೆ ಸದಸ್ಯರು ಉತ್ತರಿಸಿದ್ದಾರೆ. ಕೆಲವು ಪ್ರಶ್ನೆಗಳಿಗೆ ಕೆಲವರು ಸರಿಯಾದ ಉತ್ತರ ನೀಡಿದ್ದಾರೆ.
ಇನ್ನು ವಿಶೇಷ ಅವಕಾಶವಾಗಿ 'ನನ್ನ ಹಾಡು ನನ್ನದು' ಆಯ್ಕೆಗೆ ಸೂಚಿಸಲಾಗಿದೆ. ಈ ಸಂದರ್ಭದಲ್ಲಿ ದಿವಾಕರ್ ಮತ್ತು ನಿವೇದಿತಾ ಅವರ ನಡುವೆ ಮೆಲೊಡಿ ಸಾಂಗ್ ವಿಚಾರವಾಗಿ ಮಾತಿನ ಚಕಮಕಿ ನಡೆದಿದೆ. ಮಾತಿನ ನಡುವೆ ದಿವಾಕರ್, ಮೆಂಟಲ್ ಅಂದಿದ್ದರಿಂದ ನಿವೇದಿತಾ ಕಣ್ಣೀರಿಟ್ಟಿದ್ದಾರೆ. ಅಸಮಾಧಾನಗೊಂಡು, ಅಳುತ್ತಾ ಜಗಳವಾಡಿದ್ದಾರೆ. ಅವರನ್ನು ಸಮಾಧಾನಪಡಿಸಲು ಚಂದನ್, ಕಾರ್ತಿಕ್ ಪ್ರಯತ್ನಿಸಿದ್ದಾರೆ. ಆದರೂ ನಿವೇದಿತಾ ಮತ್ತು ದಿವಾಕರ್ ಅವರ ನಡುವೆ ಮಾತಿಗೆ ಮಾತು ಬೆಳೆದು ನಿವೇದಿತಾ ಅಳುತ್ತಾ ಅಲ್ಲಿಂದ ದೂರ ಹೋಗಿದ್ದಾರೆ. ಬಳಿಕ ಚಂದನ್ ಇನ್ನು 3 ದಿನ ಅಷ್ಟೇ ಯಾಕೆ ಜಗಳವಾಡ್ತೀರಿ ಎಂದು ನಿವೇದಿತಾ ಮತ್ತು ದಿವಾಕರ್ ಅವರನ್ನು ಸಮಾಧಾನಪಡಿಸಿದ್ದಾರೆ.
Comments