ಟಾಲಿವುಡ್ ನಲ್ಲಿ ಸದ್ದು ಮಾಡ್ತಿದೆ ಕಿರಿಕ್ ಬೆಡಗಿಯ 'ಡ್ರಂಕ್ ಅ್ಯಂಡ್ ಡ್ರೈವ್'

ತೆಲುಗಿನಲ್ಲಿ ಕೂಡಾ ಬಹುನಿರೀಕ್ಷಿತ ಚಿತ್ರವೆಂದರೆ 'ಚಲೋ'. ತೆಲುಗು ನಟ ನಾಗ ಶೌರ್ಯಗೆ ನಾಯಕಿಯಾಗಿ ರಶ್ಮಿಕಾ ನಟಿಸಿದ್ದಾರೆ. ಟೀಸರ್, ಟ್ರೇಲರ್ ಹಾಗೂ ಹಾಡುಗಳ ಮೂಲಕ ಈಗಾಗಲೇ ' ಚಲೋ' ಸದ್ದು ಮಾಡ್ತಿದೆ. ಇನ್ನು ಚಿತ್ರದಲ್ಲಿ ಇತರ ಹಾಡುಗಳಿಗಿಂತ 'ಡ್ರಂಕ್ ಅ್ಯಂಡ್ ಡ್ರೈವ್' ಹಾಡು ಎಲ್ಲರ ಮೆಚ್ಚುಗೆ ಗಳಿಸಿದೆ.
ಇದೀಗ ಹಾಡಿನ ಮೇಕಿಂಗ್ ವಿಡಿಯೋ ಯೂಟ್ಯೂಬ್‌ನಲ್ಲಿ ಲಭ್ಯವಿದೆ. ಹಾಡಿಗೆ ಕೊರಿಯೋಗ್ರಫಿ ಮಾಡಿರುವ ವಿಜಯ್ ಮಾಸ್ಟರ್, ಗಾಯಕ ರಾಹುಲ್ ಸಿಲ್ಪಿಗುಂಜ್, ಸಾಹಿತಿ ಶ್ಯಾಮ್ ಕಸರ್ಲಾ, ಚಿತ್ರದ ನಿರ್ದೇಶಕ ವೆಂಕಿ ಕುಡುಮುಲ, ಸಂಗೀತ ನಿರ್ದೇಶಕ ಮಹತಿ ಸ್ವರ ಸಾಗರ್ ಹಾಡಿನ ಮೇಕಿಂಗ್ ಬಗ್ಗೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಚಿತ್ರ ಫೆಬ್ರವರಿ 2 ರಂದು ಬಿಡುಗಡೆಯಾಗಲಿದೆ.
Comments