ಗಣರಾಜ್ಯೋತ್ಸವಕ್ಕೆ ಎಂಟ್ರಿ ಕೊಡ್ತಿದ್ದಾನೆ 'ಕನಕ'
ಕನಕ' ಸಿನಿಮಾ ಒಬ್ಬ ಅಪ್ಪಟ್ಟ ಡಾ.ರಾಜ್ ಕುಮಾರ್ ಅವರ ಅಭಿಮಾನಿಯ ಕಥೆಯಾಗಿದ್ದು, ಇಲ್ಲಿ ದುನಿಯಾ ವಿಜಯ್ ಆಟೋ ಡ್ರೈವರ್ ಆಗಿದ್ದಾರೆ. ಅಣ್ಣವ್ರ ಅಭಿಮಾನಿಯಾಗಿ ದುನಿಯಾ ವಿಜಯ್ ಮಿಂಚಿದ್ದಾರೆ. ಈಗಾಗಲೇ ಸಿನಿಮಾ ಟ್ರೇಲರ್ ಮತ್ತು ಹಾಡುಗಳು ಸೂಪರ್ ಹಿಟ್ ಆಗಿದೆ. ಮಾಸ್ ಪ್ರೇಕ್ಷಕರಿಗೆ ಇಷ್ಟ ಆಗುವ ಸಿನಿಮಾ ಇದಾಗಿದೆ.
'ಕನಕ' ಸಿನಿಮಾದಲ್ಲಿ ಇಬ್ಬರು ನಾಯಕಿಯರಿದ್ದು, ಹರಿಪ್ರಿಯಾ ಮತ್ತು ಕೆಂಡಸಂಪಿಗೆ ಬೆಡಗಿ ಮಾನ್ವಿತಾ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆರ್.ಚಂದ್ರು ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ನವೀನ್ ಸಜ್ಜು ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಅವರ ಎಣ್ಣಿ ಹಾಡು ಎಲ್ಲರ ಮನ ಗೆದ್ದಿದೆ. ಇನ್ನು ಗಾಂಧಿನಗರದಲ್ಲಿ ನರ್ತಕಿ ಚಿತ್ರಮಂದಿರದಲ್ಲಿ 'ಕನಕ' ರಿಲೀಸ್ ಆಗುತ್ತಿದೆ. ಈ ಚಿತ್ರಮಂದಿರದ ಮುಂದೆ ಇಂದಿನಿಂದನೇ ಸಂಭ್ರಮ ಶುರುವಾಗಿದೆ. ನರ್ತಕಿ ಚಿತ್ರಮಂದಿರದ ಮುಂದೆ ಡಾ.ರಾಜ್ ಕುಮಾರ್ ಮತ್ತು ದುನಿಯಾ ವಿಜಯ್ ಅವರ ದೊಡ್ಡ ಕಟ್ ಔಟ್ ಹಾಕಿ ಅದಕ್ಕೆ ಇಂದು ಅಭಿಮಾನಿಗಳು ಹಾಲಿನ ಅಭಿಷೇಕ ಮಾಡಲಿದ್ದಾರೆ.
Comments