ಹಿರಿಯ ನಟಿ ಕೃಷ್ಣಕುಮಾರಿ ನಿಧನ

24 Jan 2018 10:57 AM | Entertainment
272 Report

ಡಾ. ರಾಜ್ ಕುಮಾರ್, ಎನ್.ಟಿ.ಆರ್., ನಾಗೇಶ್ವರರಾವ್ ಮೊದಲಾದ ನಟರೊಂದಿಗೆ ಅವರು ನಟಿಸಿದ್ದರು. 60 -70 ರ ದಶಕದಲ್ಲಿ ಜನಪ್ರಿಯ ತಾರೆಯಾಗಿದ್ದರು. 'ಭಕ್ತ ಕನಕದಾಸ', 'ಆಶಾ ಸುಂದರಿ', 'ಶ್ರೀಶೈಲ ಮಹಾತ್ಮೆ' ಮೊದಲಾದ ಚಿತ್ರಗಳಲ್ಲಿ ಅವರು ಅಭಿನಯಿಸಿದ್ದಾರೆ.

ಹಿರಿಯ ನಟಿ ಕೃಷ್ಣಕುಮಾರಿ(84) ಬೆಂಗಳೂರಿನ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ನಟಿ ಸಾಹುಕಾರ್ ಜಾನಕಿ ಅವರ ಸಹೋದರಿಯಾಗಿದ್ದ ಕೃಷ್ಣಕುಮಾರಿ ಅವರು, ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಯ ಸುಮಾರು 230 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

 

Edited By

Shruthi G

Reported By

Madhu shree

Comments