ಬಿಗ್ ಬಾಸ್ ಸೀಸನ್ -5 ವಿನ್ನರ್ ಯಾರೆಂದು ತಿಳಿಯುವ ಮುನ್ನವೇ, ಸೀಸನ್ -6 ನ ತಯಾರಿ..!!

ಹೌದು, ಬಿಗ್‌ಬಾಸ್ 5 ನೇ ಸೀಸನ್ ಯಶಸ್ವಿಯಾಗಿದೆ. ಅದರಲ್ಲೂ ಈ ಸೀಸನ್‌ನಲ್ಲಿ ಹೊಸದಾಗಿ ಪ್ರಾರಂಭಗೊಂಡಿದ್ದ 'ಕಿಚ್ಚನ ಕಿಚನ್ ಟೈಮ್'ಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆಯಂತೆ. ಆದ್ದರಿಂದ 6 ನೇ ಸೀಸನ್‌ಗೆ ಈಗಾಗಲೇ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆಯಂತೆ. ಮೂಲಗಳ ಪ್ರಕಾರ ಮುಂದಿನ ಸೀಸನ್ ಸೆಪ್ಟೆಂಬರ್‌ನಲ್ಲಿ ಪ್ರಾರಂಭವಾಗಲಿದೆಯಂತೆ.
ಈ ಸೀಸನ್‌ನ್ನು ಕೂಡ ಕಿಚ್ಚ ಸುದೀಪ್ ಅವರೇ ಹೋಸ್ಟ್ ಮಾಡಲಿದ್ದಾರಂತೆ. ಸದ್ಯ ಎಲ್ಲರ ಚಿತ್ತ ಬಿಗ್‌ಬಾಸ್ 5 ನೇ ಸೀಸನ್ ವಿನ್ನರ್ ಯಾರಾಗಬಹುದು ಎನ್ನುವುದರ ಮೇಲೆ ನೆಟ್ಟಿದೆ. ಇದರ ನಡುವೆಯೇ ಬಿಗ್‌ಬಾಸ್ ಸೀಸನ್ 6ಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದೆಯಂತೆ ಬಿಗ್‌ಬಾಸ್ ತಂಡ.
Comments