ಅಭಿಶೇಕ್ ಗೌಡ ಚೊಚ್ಚಲ ಚಿತ್ರಕ್ಕೆ ಪವನ್ ಒಡೆಯರ್ ಬದಲಿಗೆ ಚೇತನ್ ನಿರ್ದೇಶನ

ರೆಬಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಶೇಕ್ ಗೌಡ ಪಾದಾರ್ಪಣೆ ಚಿತ್ರಕ್ಕೆ ಬಾರಿ ಕಸರತ್ತು ನಡೆಯುತ್ತಿದೆ. ಪವನ್ ಒಡೆಯರ್ ಅವರು ಮತ್ತೊಂದು ಚಿತ್ರದ ನಿರ್ದೇಶನದಲ್ಲಿ ಬ್ಯುಸಿಯಾಗಿದ್ದು ಇದರಿಂದಾಗಿ ಡೇಟ್ಸ್ ಗಳು ಸಾಧ್ಯವಾಗದ ಕಾರಣ ಪವನ್ ಒಡೆಯರ್ ಬದಲಿಗೆ ಚೇತನ್ ಕುಮಾರ್ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಈ ಸಂಗತಿಯನ್ನು ಸಂದೇಶ್ ಪ್ರೊಡೆಕ್ಷನ್ ಸ್ಪಷ್ಟಪಡಿಸಿದ್ದು ಮುಂದಿನ ದಿನಗಳಲ್ಲಿ ಅಧಿಕೃತವಾಗಿ ಘೋಷಣೆ ಮಾಡಲಿದೆ.
ಇನ್ನು ಚೇತನ್ ಕುಮಾರ್ ಅವರ ಚಿತ್ರಕಥೆಯನ್ನೇ ಬಳಸಲಾಗುತ್ತಿದ್ದು ಇದು ಅಭಿಶೇಕ್ ಪಾದಾರ್ಪಣೆ ಚಿತ್ರಕ್ಕೆ ಸೂಕ್ತವಾಗಿರುತ್ತದೆ ಎಂದು ಚಿತ್ರ ನಿರ್ಮಾಪಕರು ಪರಿಗಣಿಸಿದ್ದು ಕಥೆಯ ಕುರಿತು ಕೆಲಸಗಳು ನಡೆಯುತ್ತಿವೆ. ಹಲವು ಚಿತ್ರಗಳಿಗೆ ಸಂಭಾಷಣೆ, ಸಾಹಿತ್ಯ ಜತೆಗೆ ಸಹ ನಿರ್ದೇಶಕನಾಗಿ ಕೆಲಸ ಮಾಡಿದ್ದ ಚೇತನ್ ಕುಮಾರ್ ನಂತರ ಸೂಪರ್ ಹಿಟ್ ಬಹದ್ದೂರ್ ಮತ್ತು ಭರ್ಜರಿ ಚಿತ್ರಗಳನ್ನು ನಿರ್ದೇಶಿದ್ದರು. ಇನ್ನು ದರ್ಶನ್ ಅಭಿನಯದ 51ನೇ ಚಿತ್ರಕ್ಕೆ ಚೇತನ್ ಸಂಭಾಷಣೆ ಬರೆಯುತ್ತಿದ್ದಾರೆ.
Comments