ಮಾನ್ವಿತ ಅಭಿನಯದ ಚಿತ್ರಗಳು ಸಾಲು ಸಾಲು ತೆರೆ ಕಾಣಲಿವೆ..!
ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಕನಕ, ಟಗರು ಚಿತ್ರಗಳು ಬಿಡುಗಡೆಗೆ ರೆಡಿಯಾಗಿವೆ. ಇನ್ನು ರಿಲಾಕ್ಸ್ ಸತ್ಯ ಮತ್ತು ತಾರಕಾಸುರ ಚಿತ್ರಗಳ ಪೋಸ್ಟ್ ಪ್ರೊಡೆಕ್ಷನ್ ಕೆಲಸಗಳು ನಡೆಯುತ್ತಿವೆ. ಕೆಂಡಸಂಪಿಗೆ ಚಿತ್ರದ ನಂತರ ಮಾನ್ವಿತ ಚೌಕದಲ್ಲಿ ಚಿಕ್ಕ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದರು. ಆದರೆ ಅವರು ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದ ಚಿತ್ರಗಳು ಬಿಡುಗಡೆಯಾಗಿರಲಿಲ್ಲ.
ನಿರ್ದೇಶಕ ಆರ್ ಚಂದ್ರು ನಿರ್ದೇಶನದ ದುನಿಯಾ ವಿಜಯ್ ಅಭಿನಯದ ಕನಕ ಚಿತ್ರ ಬಿಡುಗಡೆಗೆ ರೆಡಿಯಾಗಿದೆ. ವಿಜಯ್ ಗೆ ನಾಯಕಿಯಾಗಿ ಮಾನ್ವಿತ ಹರೀಶ್ ಕಾಣಿಸಿಕೊಳ್ಳುತ್ತಿದ್ದಾರೆ. ಕೆಂಡಸಂಪಿಗೆ ಚಿತ್ರದಲ್ಲಿ ನಾನು 19 ವರ್ಷದ ಯುವತಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೆ. ಈಗ ನಾನು ಬೆಳೆದ ಹಾಗೆ ಭಾಸವಾಗಿದೆ ಎಂದು ಮಾನ್ವಿತ ಹರೀಶ್ ಹೇಳಿದ್ದಾರೆ. ಕನಕ ನನ್ನ ಮೊದಲ ಮಾಸ್ ಚಿತ್ರ. ಈ ಚಿತ್ರದಲ್ಲಿ ನಾನು ಮುಗ್ಧಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಪಕ್ಕದ ಮನೆಯ ಹುಡುಗಿಯಾಗಿ ಮತ್ತು ನಾನು ನನ್ನ ಮುಂದಿನ ಚಿತ್ರಗಳಲ್ಲೂ ಅದೇ ತಾಜಾತನವನ್ನು ತರಲು ಪ್ರಯತ್ನಿಸುತ್ತೇನೆ ಎಂದರು. ಕನಕ ಚಿತ್ರದ ಚಿತ್ರೀಕರಣದ ವೇಳೆ ಸಾಕಷ್ಟು ಎಂಜಾಯ್ ಮಾಡಿದೆ. ಹಾಡಿನ ಚಿತ್ರೀಕರಣ, ಸಾಧು ಕೋಕಿಲ ಅವರೊಂದಿಗಿನ ಹಾಸ್ಯ ದೃಶ್ಯಗಳಲ್ಲಿ ಅಭಿನಯಿಸುವಾಗ ಸಾಕಷ್ಟು ಖುಷಿ ಪಟ್ಟೆ ಎಂದರು.
Comments