ಹಾರ್ದಿಕ್ ಪಾಂಡ್ಯಾರ ಮನ ಗೆದ್ದ ಬಾಲಿವುಡ್ ನಟಿ !!

ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಮದುವೆ ಬೆನ್ನಲ್ಲೇ ಮತ್ತೋರ್ವ ಕ್ರಿಕೆಟಿಗ ಬಾಲಿವುಡ್ ನಟಿಯೊಂದಿಗೆ ನಂಟು ಹೊಂದಿದ್ದಾರೆ ಅನ್ನೋ ಗಾಸಿಪ್ ಕೇಳಿ ಬರ್ತಿದೆ. ಟೀಂ ಇಂಡಿಯಾದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ, ಮಾಜಿ ಬಿಗ್ ಬಾಸ್ ಸ್ಪರ್ಧಿ ಎಲ್ಲಿ ಅವರಾಂ ಜೊತೆ ಡೇಟಿಂಗ್ ಮಾಡ್ತಿದ್ದಾರಂತೆ.
ಮೊದಲ ಬಾರಿ ಭೇಟಿಯಾದಾಗ್ಲೇ ಇಬ್ಬರೂ ಪರಸ್ಪರ ಪ್ರೀತಿಯಲ್ಲಿ ಬಿದ್ದಿದ್ದಾರಂತೆ. ಒಂದು ವರ್ಷದ ಹಿಂದೆ ಯಾವುದೋ ಈವೆಂಟ್ ನಲ್ಲಿ ಇಬ್ಬರ ಭೇಟಿಯಾಗಿತ್ತು. ಕಳೆದ ಡಿಸೆಂಬರ್ ನಲ್ಲಿ ಹಾರ್ದಿಕ್ ಪಾಂಡ್ಯ ಸಹೋದರ ಕೃಣಾಲ್ ಪಾಂಡ್ಯ ಮದುವೆ ನೆರವೇರಿತ್ತು. ಆ ಮದುವೆಗೆ ಎಲ್ಲಿ ಅವರಾಮ್ ಕೂಡ ಬಂದಿದ್ರು. ಇಬ್ಬರೂ ಜೊತೆಯಾಗಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಇನ್ನೂ ಹಲವಾರು ಪಾರ್ಟಿ ಮತ್ತು ಫಂಕ್ಷನ್ ಗಳಲ್ಲಿ ಹಾರ್ದಿಕ್ ಹಾಗೂ ಎಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಆದ್ರೆ ತಮ್ಮಿಬ್ಬರ ರಿಲೇಶನ್ಷಿಪ್ ಬಗ್ಗೆ ಬಾಯ್ಬಿಟ್ಟಿಲ್ಲ.
Comments