ಬಿಗ್ ಬಾಸ್ ಮನೆಯಿಂದ ಹೊರಬಿದ್ದ 2 ನೇ ಸ್ಪರ್ಧಿ ಯಾರು ಎಂಬ ಕುತೂಹಲಕ್ಕೆ ತೆರೆ ..!
ಮನೆಯೊಳಗಿದ್ದ 6 ಮಂದಿ ಸದಸ್ಯರಲ್ಲಿ ಮೊದಲಿಗೆ ಕಾರ್ತಿಕ್, ನಂತರದಲ್ಲಿ ಚಂದನ್ ಅವರು ಸೇಫ್ ಆಗಿದ್ದಾರೆ. ಬಳಿಕ ಗಾರ್ಡನ್ ಏರಿಯಾದಲ್ಲಿ ಸಮೀರ್, ದಿವಾಕರ್, ನಿವೇದಿತಾ ಹಾಗೂ ಶ್ರುತಿ ಅವರಿಗೆ ಮನೆಯಿಂದ ಹೊರ ಹೋಗುವ ಮೊದಲು ಅಭಿಪ್ರಾಯ ಕೇಳಲಾಗಿದ್ದು ಅವರು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಈ ನಾಲ್ವರು ಸದಸ್ಯರ ಪ್ರತಿಕೃತಿಗಳನ್ನು ಇಡಲಾಗಿದ್ದು, ಅದರಲ್ಲಿ ಯಾರ ಪ್ರತಿಕೃತಿ ಬೀಳುತ್ತದೆಯೋ ಅವರು ಹೊರಗೆ ಹೋಗಲಿದ್ದಾರೆ ಎಂದು ತಿಳಿಸಲಾಗಿತ್ತು.
ಅವರಲ್ಲಿ ಶ್ರುತಿ ಮೊದಲಿಗೆ ಸೇಫ್ ಆಗಿದ್ದಾರೆ. ನಂತರ ದಿವಾಕರ್ ಸೇಫ್ ಆಗಿದ್ದಾರೆ. ಉಳಿದ ಇಬ್ಬರಲ್ಲಿ ನಿವೇದಿತಾ ಮನೆಯೊಳಗೆ ಉಳಿದರೆ, ತಮ್ಮ ಪ್ರತಿಕೃತಿ ಬಿದ್ದ ಕಾರಣ, ಸಮೀರಾಚಾರ್ಯ ಮನೆಯಿಂದ ಹೊರಗೆ ಹೋಗಿದ್ದಾರೆ. ಫಿನಾಲೆಗೆ ಕಾರ್ತಿಕ್, ಚಂದನ್, ಶ್ರುತಿ, ದಿವಾಕರ್, ನಿವೇದಿತಾ ಅವರು ಎಂಟ್ರಿ ಕೊಟ್ಟಿದ್ದಾರೆ. ಅವರಿಗೆ 'ಬಿಗ್ ಬಾಸ್' ಅಭಿನಂದಿಸಿದ್ದಾರೆ.
Comments