ರಾಕಿಂಗ್ ಸ್ಟಾರ್ ಮತ್ತು ಚಾಲೆಂಜಿಂಗ್ ಸ್ಟಾರ್ ನಡುವಿನ ಮನಸ್ತಾಪಕ್ಕೆ ಫುಲ್ ಸ್ಟಾಪ್..!!

ಏನಪ್ಪಾ ಇದು ಅಂತೀರಾ ಯಶ್ ಹಾಗೂ ದಚ್ಚು ಈಗಾಗಲೇ ಹಲವು ಬಾರಿ ಉತ್ತರ ಕೊಟ್ಟಿದ್ದಾರೆ. ಎಲ್ಲ ಕಲಾವಿದರು ಒಂದೇ, ಅವರವರು ಅವರ ಕೆಲಸ ಮಾಡಿಕೊಂಡು ಹೋಗುತ್ತಿದ್ದಾರೆ. ಯಾರ ಮಧ್ಯೆ ಮನಸ್ತಾಪ, ಕಿರಿಕ್ ಇಲ್ಲ ಎಂದು ಸ್ಪಷ್ಟಪಡಿಸಿದ್ದರು. ಸರಿ ಹಾಗಿದ್ರೆ, ಯಶ್-ದರ್ಶನ್ ಒಟ್ಟಿಗೆ ವೇದಿಕೆ ಹಂಚಿಕೊಳ್ಳುತ್ತಿದ್ದಾರೆ.
ಯಶ್ ಗೆ, ದರ್ಶನ್ ಮತ್ತು ಸುದೀಪ್ ಅಭಿಮಾನಿಗಳನ್ನ ನಿಮ್ಮ ಕಡೆ ಸೆಳೆದುಕೊಳ್ಳುತ್ತಿದ್ದಾರಂತೆ ಎಂದು ಕೇಳಿದ್ದರು. ಈ ಪ್ರಶ್ನೆಗೆ ಉತ್ತರಿಸಿದ್ದ ಯಶ್ '' ಪ್ಲೀಸ್ ನಮ್ಮ ಮಧ್ಯೆ ತಂದಿಡಬೇಡಿ. ''ನಾವೆಲ್ಲಾ ಕಲಾವಿದರು. ದಯವಿಟ್ಟು ನಮ್ಮ ನಮ್ಮಲಿ ತಂದಿಡಬೇಡಿ. ಈ ಮೆಂಟಾಲಿಟಿಯೇ ಸರಿಯಲ್ಲ, ಇಲ್ಲಿ ಎಲ್ಲರೂ ಒಂದೇ, ಯಾರೂ ದೊಡ್ಡವರಲ್ಲ, ಸಣ್ಣವರಲ್ಲ. ನಾನು ಎಲ್ಲರ ಫ್ಯಾನ್. ಈ ಮೂಲಕ ನಾನು ಹೇಳೋಕೆ ಇಷ್ಟ ಪಡುವುದೇ ಇಷ್ಟೇ, ನಾನು ಎಲ್ಲರ ಚಿತ್ರವನ್ನು ನೋಡುತ್ತೇನೆ'' ಎಂದು ಹೇಳಿದ್ದರು. 2015ರಲ್ಲಿ ನಡೆದ 'ರಾಟೆ' ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮದಲ್ಲಿ ಯಶ್ ಮತ್ತು ದರ್ಶನ್ ಒಟ್ಟಿಗೆ ವೇದಿಕೆ ಹಂಚಿಕೊಂಡಿದ್ದರು. ಅದಾದ ನಂತರ ಅಂಬರೀಶ್ ಹುಟ್ಟುಹಬ್ಬದಲ್ಲಿ ಭಾಗಿಯಾಗಿದ್ದರು. ಹ್ಯಾಪಿ ಬರ್ತಡೇ ಚಿತ್ರದ ಮುಹೂರ್ತ ಕಾರ್ಯಕ್ರಮದಲ್ಲು ಇಬ್ಬರು ಕಾಣಿಸಿಕೊಂಡಿದ್ದರು. ಆದ್ರೆ, ಒಬ್ಬರಿಗೊಬ್ಬರು ಮಾತನಾಡಿಕೊಂಡಿರಲಿಲ್ಲ. ಅದಾದ ನಂತರ ಎಲ್ಲಿಯೂ ಇವರಿಬ್ಬರು ಒಟ್ಟಿಗೆ ಸ್ಟೇಜ್ ಹತ್ತಲಿಲ್ಲ.
ಇತ್ತೀಚೆಗಷ್ಟೆ ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಯಶ್, ದರ್ಶನ್ ಅವರ 'ಕುರುಕ್ಷೇತ್ರ' ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ''ದರ್ಶನ್ ಪರ್ಸನಾಲಿಟಿ ಇಷ್ಟ. ಅವರೆದರು ನಿಂತರೇ ಬೇರೆ ಯಾರೂ ಕಾಣಲ್ಲ. ಈಗ ಕುರುಕ್ಷೇತ್ರದಲ್ಲಿ ಸೂಪರ್ ಆಗಿ ಕಾಣಿಸ್ತಿದ್ದಾರೆ. ಅವರಿಗೆ ಮಾಸ್ ಇಮೇಜ್ ಚೆನ್ನಾಗಿ ಹೋಲುತ್ತೆ. ನಮ್ಮವರು ಎಂಬ ಭಾವನೆ'' ಎಂದು ಶ್ಲಾಘನೆ ವ್ಯಕ್ತಪಡಿಸಿದ್ದರು. ರೋಟರಿ ಹೆರಿಟೇಜ್ ಮೈಸೂರು ಸ್ವರ ಸಾಗರ, ಮ್ಯೂಸಿಕ್ ಫೌಂಡೇಷನ್ ಸಹಯೋಗದಲ್ಲಿ ಜನವರಿ 20 ರಂದು ಸಂಜೆ 4.30ಕ್ಕೆ ಮಾನಸ ಗಂಗೋತ್ರಿಯ ಬಯಲು ರಂಗ ಮಂದಿರದಲ್ಲಿ 'ಸ್ವರಾಮೃತ-3' ಆರಕ್ಷಕರಿಗೆ ಗೌರವ ನಮನ ಸಂಗೀತ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ದರ್ಶನ್ ಮತ್ತು ಯಶ್ ಒಟ್ಟಿಗೆ ವೇದಿಕೆ ಹಂಚಿಕೊಳ್ಳಲಿದ್ದಾರೆ. ಇವರ ಜೊತೆ ರವಿಚಂದ್ರನ್, ಸಂಗೀತ ನಿರ್ದೇಶಕರಾದ ಹಂಸಲೇಖ, ಅರ್ಜುನ್ ಜನ್ಯ, ಅನೂಪ್ ಸಿಳೀನ್, ಖ್ಯಾತ ಹಿನ್ನೆಲೆ ಗಾಯಕರಾದ ವಿಜಯ ಪಕಾಶ್, ಸಿನಿಮಾ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಕೂಡ ಭಾಗಿಯಾಗಲಿದ್ದಾರೆ.
Comments