ರಾಜು ಕನ್ನಡ ಮೀಡಿಯಂ ಚಿತ್ರಕ್ಕೆ ಶುಭ ಹಾರೈಸಿರುವ ಕಿಚ್ಚ ಸುದೀಪ್

ಈ ವಾರ ರಾಜ್ಯದ್ಯಂತ ತೆರೆ ಕಂಡಿರುವ ರಾಜು ಕನ್ನಡ ಮೀಡಿಯಂ ಚಿತ್ರ ರಾಜ್ಯಾದ್ಯಂತ ಪ್ರದರ್ಶನ ಕಾಣುತ್ತಿದೆ. ಈ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟಿಸಿದ್ದಾರೆ. ರಾಜು ಕನ್ನಡ ಮೀಡಿಯಂ ಚಿತ್ರಕ್ಕೆ ಶುಭ ಹಾರೈಸಿರುವ ಕಿಚ್ಚ ಸುದೀಪ್ ಅವರು, ಚಿತ್ರವನ್ನುನೋಡುವಂತೆ ತಮ್ಮ ಸ್ನೇಹಿತರಲ್ಲಿ, ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
ತಮ್ಮ ಅಧಿಕೃತ ಟ್ವೀಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ಥಿಯೇಟರ್ ಗಳಿಗೆ ಹೋಗಿ ಚಿತ್ರವನ್ನು ವೀಕ್ಷಿಸಿ, ಇದುವೆ ನಿಮ್ಮಿಂದ ನಮಗೆ ದೊರೆಯುವ ದೊಡ್ಡ ಪ್ರೋತ್ಸಾಹ. ಈ ಚಿತ್ರದಲ್ಲಿ ನನ್ನನ್ನು ಸೇರಿಸಿಕೊಂಡಿದ್ದಕ್ಕೆ ಚಿತ್ರತಂಡಕ್ಕೆ ಧನ್ಯವಾದ ಹೇಳಿದ್ದಾರೆ.
Comments