ಶಾಕಿಂಗ್ ನ್ಯೂಸ್ : ಬಿಗ್ ಬಾಸ್ ಮನೆಯಿಂದ ಹೊರಬಿದ್ದ ಅನುಪಮಾ ಗೌಡ ?

ಅಕ್ಕ ಖ್ಯಾತಿಯ ಕಿರುತೆರೆ ನಟಿ ಅನುಪಮಾ ಗೌಡ ಬಿಗ್ ಬಾಸ್ ಮನೆಯಿಂದ ಹೊರಬಿದ್ದಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಬಂದಿವೆ. ಬಿಗ್ ಬಾಸ್ ಫಿನಾಲೆಗೆ ಕೆಲವೇ ದಿನಗಳು ಬಾಕಿ ಇರುವಾಗ ಎಲಿಮಿನೇಟ್ ಆಗಿರುವುದು ಅನುಪಮಾಗೆ ದೊಡ್ಡ ನಿರಾಸೆಯಾಗಿದೆ.
ಇದರೊಂದಿಗೆ ಅಂತಿಮ ಘಟ್ಟದಲ್ಲಿ ಅನುಪಮಾ ಮುಗ್ಗರಿಸಿದ್ದಾರೆ. ಕಾರ್ಯಕ್ರಮದ ಆರಂಭದಲ್ಲಿ ಜಗನ್ ಜತಗಿನ ಮನಸ್ತಾಪ, ಮುನಿಸು, ಅಳುವಿನಿಂದ ಹೆಚ್ಚು ಕಾಣಿಸಿಕೊಂಡಿದ್ದ ಅನುಪಮಾ ಕ್ರಮೇಣ ಟಾಸ್ಕ್ ಗಳಲ್ಲಿ ಉತ್ತಮವಾಗಿಪ್ರದರ್ಶನ ನೀಡುತ್ತಾ, ನಗುತ್ತಾ, ಜಾಲಿಯಾಗಿದ್ದರು. ಈ ಬಾರಿಯ ಬಿಗ್ ಬಾಸ್ ಅವತರಣಿಕೆಯಲ್ಲಿ ಮೊದಲ ಹಾಗೂ ಕೊನೆಯ ಕ್ಯಾಪ್ಟನ್ ಆಗಿದ್ದು ಅನುಪಮಾ ಎಂಬುದು ವಿಶೇಷ. ಇನ್ನು ಕಾರ್ಯಕ್ರಮದಲ್ಲಿ ಜಯರಾಂ ಕಾರ್ತಿಕ್, ಚಂದನ್ ಶೆಟ್ಟಿ, ನಿವೇದಿತಾ, ಶೃತಿ, ಸಮೀರ್ ಆಚಾರ್ಯ, ದಿವಾಕರ್ ಉಳಿದುಕೊಂಡಿದ್ದು, ಒಬ್ಬೊಬ್ಬರು ತಮ್ಮದೇ ಆದ ವಿಶೇಷತೆಗಳಿಂದ ಇಷ್ಟು ದೂರ ಸಾಗಿ ಬಂದಿದ್ದಾರೆ. ಇವರಲ್ಲಿ ಅಂತಿಮ ಅಂತಿಮ ಐದರಲ್ಲಿಸ್ಥಾನ ಪಡೆಯುವರಾರು? ಮೊದಲ ರನ್ನರ್ ಅಪ್ ಹಾಗೂ ದ್ವಿತೀಯ ರನ್ನರ್ ಅಪ್ ಆಗಿ ಸ್ಥಾನಕ್ಕೆತೃಪ್ತಿಯಾಗುವವರಾರು? ಟ್ರೋಫಿ ಗೆಲ್ಲುವರಾರು ಎಂಬುದಕ್ಕೆ ಇನ್ನು ಕೆಲವೇ ದಿನಗಳು ಮಾತ್ರ ಕಾಯಬೇಕಿದೆ.
Comments