ಮೊದಲ ಬಾರಿಗೆ ಕಿರುಚಿತ್ರಕ್ಕೆ ಧ್ವನಿ ನೀಡಿದ ಕಿಚ್ಚ ..!!
ಸಿನಿ ಪರ್ತಕರ್ತರಾಗಿರುವ ವಿಜಯ ಭರಮ ಸಾಗರ ರವರು ಈಗ ಕಿರುಚಿತ್ರವನ್ನು ನಿರ್ದೇಶನ ಮಾಡಿದ್ದು, ಅದಕ್ಕೆ "ಭಾರತಿಪುರ ಕ್ರಾಸ್" ಎಂದು ಹೆಸರಿಡಲಾಗಿದೆ. ಈಗಾಗಲೇ ಒಂದಿಷ್ಟು ಚಿತ್ರಗಳಿಗೆ ಹಾಡು, ಸಂಭಾಷಣೆ ಬರೆದು ಗಭನ ಸೆಳೆದಿರುವ ವಿಜರವರು ಈಗ,ಕಿರುಚಿತ್ರ ಮಾಡಿ, ಚಂದದ ಪೋಸ್ಟರ್ ಸಹ ಬಿಡುಗಡೆ ಮಾಡಿದ್ದಾರೆ.
ಇದೇ ಮೊದಲ ಬಾರಿಗೆ ಸುದೀಪ್ ಕಿರುಚಿತ್ರಕ್ಕೆ ಧ್ವನಿ ನೀಡಿದ್ದು, ಚಿತ್ರದ ಕೊನೆಯಲ್ಲಿ ಕಥೆಯ ಆಶಯವನ್ನೂ ಹೇಳಿದ್ದಾರೆ. ಮನುಷ್ಯನೊಳಗಿನ ಕೋಪ, ನಾನು ಹಾಗೂ ನೀನು ಎಂಬ ಅಹಂಗಳನ್ನು ಪ್ರತಿನಿಧಿಸುವ ಈ ಕಿರುಚಿತ್ರದಲ್ಲಿ ಲಿಖಿತ್ ಸೂರ್ಯ ನಾಯಕನಾಗಿದ್ದು, ಪೂಜಾ ಹುಣಸೂರು ನಾಯಕಿಯಾಗಿದ್ದಾರೆ.
Comments