ಗಣರಾಜ್ಯೋತ್ಸವದಂದು ಕನಕನ ಆಟ ಶುರು...!!

17 Jan 2018 3:15 PM | Entertainment
434 Report

ಬಹು ನಿರೀಕ್ಷಿತ ಚಿತ್ರ 'ಕನಕ' ಇದೇ ಗಣರಾಜ್ಯೋತ್ಸವಕ್ಕೆ ತೆರೆಗೆ ಬರಲು ಸಿದ್ದವಾಗಿದೆ. ದುನಿಯಾ ವಿಜಯ್ ನಟನೆಯ ಆರ್.ಚಂದ್ರು ನಿರ್ದೇಶನದಲ್ಲಿ ಸೆಟ್ಟೇರುತ್ತಿರುವ ಕನಕ' ಚಿತ್ರ ಇದೆ ಗಣರಾಜ್ಯದಿನ, ಜ.26ಕ್ಕೆ ಚಿತ್ರ ಬಿಡುಗಡೆ ಮಾಡಲು ನಿರ್ಧರಿಸಿದೆ. ಕನಕ ರಾಜ್ಯಾದ್ಯಂತ ಸುಮಾರು 400 ಚಿತ್ರಮಂದಿರಗಳಲ್ಲಿ ಏಕಕಾಲಾದಲ್ಲಿ ಬಿಡುಗಡೆ ಕಾಣಲಿದೆ.

"ಕರ್ನಾಟಕದ ಎಲ್ಲಾ ಭಾಗಗಳಿಗೂ ಚಿತ್ರವು ತಲುಪುವಂತೆ ನಾವು ಕೆಲಸ ನಾಡುತ್ತಿದ್ದೇವೆ" ಎಂದು ನಿರ್ದೇಶಕರು ಹೇಳಿದ್ದಾರೆ. ಇದೇ ವೇಳೆ ಚಿತ್ರವು ಬಿಡುಗಡೆಗೆ ಸಿದ್ದವಾಗಿರುವ ಹಿನ್ನೆಲೆಯಲ್ಲಿ ಚಿತ್ರದಲ್ಲಿ ರೂಪಿಕಾ ಅವರ ಪಾತ್ರದ ಬಗೆಗೆ ನಿರ್ದೇಶಕರು ವಿವರಣೆ ನೀಡಿದ್ದಾರೆ. "ಚಿತ್ರದಲ್ಲಿ ಆಕೆಯದು ನೆಗೆಟಿವ್ ಶೇಡ್ ಇರುವ ಪಾತ್ರವಾಗಿದ್ದು ಆಕೆ ಒಬ್ಬ ನಾಯಕಿ ಎನ್ನುವುದಕ್ಕಿಂತಲೂ ಒಳ್ಳೆಯ ಕಲಾವಿದೆ ಎನ್ನುವುದು ಮುಖ್ಯ, ನಾನು ಅವರ ಅಭಿನಯವನ್ನು ಗಮನಿಸಿದ್ದೇನೆ. ಈ ಪಾತ್ರಕ್ಕೆ ಅವರು ಸರಿಯಾದ ಆಯ್ಕೆ ಎಂದು ನನಗೆ ನಂಬಿಕೆ ಇತ್ತು. "ನಿರ್ದೇಶಕ ಚಂದ್ರು ಹೇಳಿದರು. ನೆಗೆಟಿವ್ ಪಾತ್ರದಲ್ಲಿ ರೂಪಿಕಾ ಕಾಣಿಸಿಕೊಳ್ಳುತ್ತಿರುವುದಕ್ಕೆ ಕಾರಣವಿದ್ದು ಆಕೆಯ ಪಾತ್ರದಲ್ಲಿ ರೂಪಾಂತರದ ಕಥೆ ಇದೆ. ಇದು ಚಿತ್ರದ ಪ್ರಮುಖ ಟ್ವಿಸ್ಟ್ ಸಹ ಆಗಿದೆ ಎಂದು ನಿರ್ದೇಶಕರಖೇಳಿದ್ದಾರೆ. ಚಂದ್ರು ಸ್ವಂತ ನಿರ್ಮಾಣ ಸಂಸ್ಥೆಯಡಿಯಲ್ಲಿ ಬರುತ್ತಿರುವ ಮೂರನೇ ಚಿತ್ರವಾದ ಕನಕದಲ್ಲಿ ಹರಿಪ್ರಿಯ ಹಾಗೂ ಮಾನ್ವಿತಾ ಹರೀಶ್ ಮುಖ್ಯ ಪಾತ್ರಗಳಲ್ಲಿ ಖಾಣಿಸಿಕೊಲ್ಳುತ್ತಿದ್ದಾರೆ.ಕೆಪಿ ನಂಜುಂಡಿ, ಸಾಧು ಕೋಕಿಲಾ, ರವಿಶಂಕರ್ ಹಾಗೂ ಬುಲೆಟ್ ಪ್ರಕಾಶ್ ಚಿತ್ರದಲ್ಲಿ ಅಭಿನಯಿಸಿದ್ದಾರೆ.ನವೀನ್ ಸಜ್ಜು ಸಂಗೀತ, ಸತ್ಯ ಹೆಗಡೆ ಛಾಯಾಗ್ರಹಣ ಈ ಚಿತ್ರಕ್ಕಿದೆ.

Edited By

Shruthi G

Reported By

Madhu shree

Comments